HomeEntertainmentಸಿನಿ ಪ್ರೇಕ್ಷಕರ ಗಮನ ಸೆಳೆದ 'Supplier ಶಂಕರ'

ಸಿನಿ ಪ್ರೇಕ್ಷಕರ ಗಮನ ಸೆಳೆದ ‘Supplier ಶಂಕರ’

ನಿಶ್ಚಿತ್ ಕೊರೋಡಿ ಅಭಿನಯದ ‘supplier ಶಂಕರ’ ಸಿನಿಮಾ ನಿನ್ನೆ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಸಿನಿಪ್ರೇಕ್ಷಕರ ಮನಮುಟ್ಟುವಲ್ಲಿ ಯಶಸ್ವಿಯಾಗಿದೆ. ಕಾಮಿಡಿ ಲವ್ ಸ್ಟೋರಿ ಜೊತೆಗೆ ಕ್ಲೈಮ್ಯಾಕ್ಸ್ ನಲ್ಲಿ ಸೆಂಟಿಮೆಂಟ್ ಕೂಡ ಇದೆ. ಪ್ರೇಕ್ಷಕರಲ್ಲಿ ಕಣ್ಣೀರು ಬರೆಸುವಷ್ಟು ಈ ಸಿನಿಮಾ ಗಮನ ಸೆಳೆದಿದೆ.

ರಂಜಿತ್ ಸಿಂಗ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ನಿಶ್ಚಿತ್ ಕೊರೋಡಿ, ಬಾರ್ ಸಪ್ಲೈಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಟಿ ದೀಪಿಕಾ ಆರಾಧ್ಯ ಶಾಲಾ ಶಿಕ್ಷಕಿಯಾಗಿ ಅಭಿನಯಿಸಿದ್ದಾರೆ.

ಇನ್ನುಳಿದಂತೆ ದೀಪಿಕಾ ಆರಾಧ್ಯ, ಗೋಪಾಲಕೃಷ್ಣ ದೇಶಪಾಂಡೆ, ಜ್ಯೋತಿರೈ, ವಿಜಯ್ ವಿಶ್ವನಾಥ್, ನವೀನ್ ಡಿ ಪಡೀಲ್ ತೆರೆ ಹಂಚಿಕೊಂಡಿದ್ದಾರೆ. ಆರ್ ಬಿ ಭರತ್ ಸಂಗೀತ ಸಂಯೋಜನೆ ನೀಡಿದ್ದು, ತ್ರಿನೇತ್ರ ಫಿಲಂ ಬ್ಯಾನರ್ ನಲ್ಲಿ ಚಂದ್ರಶೇಖರ್ ಮತ್ತು ನಾಗೇಂದ್ರ ಸಿಂಗ್ ನಿರ್ಮಾಣ ಮಾಡಿದ್ದಾರೆ. ಸತೀಶ್ ಚಂದ್ರಯ ಸಂಕಲನ ಹಾಗೂ ಸತೀಶ್ ಕುಮಾರ್ ಛಾಯಾಗ್ರಹಣವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular