ಮಂಡ್ಯ : ಮಂಡ್ಯದ ಹನುಮಧ್ವಜ ವಿವಾದದ ಬಳಿಕ ರಾಜ್ಯದ ಹಲವು ಕಡೆ ಧ್ವಜ ದಂಗಲ್ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ಪೋಸ್ಟ್ ಗಳನ್ನು ಹರಿಬಿಡಲಾಗುತ್ತಿದೆ.
ಮಂಡ್ಯದ ಹನುಮಧ್ವಜ ವಿವಾದದ ಹಿನ್ನೆಲೆ ಮಂಡ್ಯದಲ್ಲಿ ಪೊಲೀಸರು ಅಲರ್ಟ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ರೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಧ್ವಜ ವಿವಾದ ಘಟನೆ ಬಹಳ ಸೂಕ್ಷ್ಮವಾಗಿದ್ದು, ಯಾರೇ ಆಗಲಿ ಸೋಶಿಯಲ್ ಮೀಡಿಯಾದಲ್ಲಿ ಸಾಮಾಜಿಕ ಸ್ವಾಸ್ಥಕ್ಕೆ ಧಕ್ಕೆ ತರುವ ಚಿತ್ರಗಳು, ಪ್ರಚೋದನಕಾರಿ ಹೇಳಿಕೆಗಳನ್ನು ಹರಿಬಿಟ್ಟರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.