ನವದೆಹಲಿ: ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಹೆಸರಿನ ಆಧಾರದ ಮೇಲೆ ಹಣ ವರ್ಗಾಯಿಸುವ ಇಮ್ಮಿಡಿಯೇಟ್ ಪೇಮೆಂಟ್ ಸರ್ವಿಸ್(IMPS) ಹೊಸ ನಿಯಮ ಗುರುವಾರದಿಂದ ಅನ್ವಯವಾಗಲಿದೆ ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ(NPCI) ಹೇಳಿದೆ.
ಈ ಹಿಂದಿನಂತೆ ಬ್ಯಾಂಕಿನ ಐಎಫ್ಎಸ್‌ಸಿ ಸಂಖ್ಯೆಯಾಗಲಿ, ಫಲಾನುಭವಿ ವಿವರವಾಗಲಿ ಅಗತ್ಯ ಇರುವುದಿಲ್ಲ. IMPS ವ್ಯವಸ್ಥೆಯ ಮೂಲಕ 5 ಲಕ್ಷ ರೂಪಾಯಿವರೆಗೆ ಹಣ ವರ್ಗಾವಣೆ ಮಾಡಬಹುದಾಗಿದ್ದು, ಈ ಎರಡು ಪಾವತಿ ವಿಧಾನಗಳ ಮೂಲಕ ಸೌಲಭ್ಯ ಬಳಸಿಕೊಳ್ಳಬಹುದು.
ಕೇವಲ ಮೊಬೈಲ್ ಸಂಖ್ಯೆ, ಬ್ಯಾಂಕ್ ಹೆಸರಿನಿಂದ ಹಣ ವರ್ಗಾವಣೆ ಮಾಡಬಹುದು. ಇದು ಹಣ ಆನ್ಲೈನ್ ಹಣಕಾಸು ವ್ಯವಹಾರದಲ್ಲಿ ಪ್ರಮುಖ ಬೆಳವಣಿಗೆಯಾಗಿದೆ. ಹಣ ಪಡೆಯುವ ವ್ಯಕ್ತಿಯ ಹೆಸರು ಸೇರ್ಪಡೆ ಮಾಡಿಕೊಳ್ಳದೆ ಐದು ಲಕ್ಷ ರೂ. ವರೆಗೆ ಹಣ ವರ್ಗಾಯಿಸಬಹುದು.
ಪ್ರಸ್ತುತ IMPS ಮೂಲಕ ಹಣ ಪಾವತಿಯ ಎರಡು ವಿಧಾನಗಳಿವೆ. ಬ್ಯಾಂಕ್ ಖಾತೆ ಸಂಖ್ಯೆ, ಬ್ಯಾಂಕ್ ಹೆಸರು, ಅದರ IFSC ಕೋಡ್ ಬಳಸುವುದು, ಮತ್ತೊಂದು ಬ್ಯಾಂಕ್ ಖಾತೆಯಿಂದ ಇನ್ನೊಂದು ಖಾತೆಗೆ ಹಣ ಕಳಿಸುವಾಗ ಫಲಾನುಭವಿ ಹಣ ಸ್ವೀಕರಿಸಬೇಕಾದವರನ್ನು ಗುರುತಿಸಲು ಮೊಬೈಲ್ ಸಂಖ್ಯೆ ಮತ್ತು ಗ್ರಾಹಕರಿಗೆ ಬ್ಯಾಂಕ್ ಒದಗಿಸುವ 7 ಅಂಕಿಗಳ ಸಂಖ್ಯೆ ಮೊಬೈಲ್ ಮನಿ ಐಡೆಂಟಿಫಿಯರ್ ಬಳಸಬೇಕಿದೆ.