ಚಳಿಗಾಲದಲ್ಲಿ ಆಗಾಗ ಸೀನು ಬರುತ್ತಲೇ ಇರುತ್ತದೆ. ಬೆಳಗಿನ ಸಮಯದಲ್ಲಂತೂ ಈ ಸಮಸ್ಯೆ ಹೆಚ್ಚು. ಸಾಮಾನ್ಯವಾಗಿ ಒಂದೆರಡು ಬಾರಿ ಸೀನು ಬಂದರೆ ನಾವು ಅದನ್ನು ನಿರ್ಲಕ್ಷಿಸುತ್ತೇವೆ. ಆದರೆ ಅದು ಮಿತಿಮೀರಿದರೆ ಸಮಸ್ಯೆಗಳಾಗಬಹುದು. ನಮ್ಮ ಸುತ್ತಮುತ್ತ ಇರುವವರಿಗೂ ಸೋಂಕು ತಗುಲುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಗಾಬರಿಯಾಗುವ ಬದಲು ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಿ.
ಬಿಸಿ ನೀರು ಮತ್ತು ಉಪ್ಪು
ಇದು ಅಜ್ಜಿಯರ ಕಾಲದ ಹಳೆಯ ಚಳಿಗಾಲದ ಮನೆಮದ್ದು. ಉಪ್ಪು ಬೆರೆಸಿದ ಬೆಚ್ಚಗಿನ ನೀರಿನಲ್ಲಿ 3-4 ಬಾರಿ ಗಾರ್ಗ್ಲಿಂಗ್ ಮಾಡುವುದರಿಂದ ಸೀನುವಿಕೆ ಕಡಿಮೆಯಾಗುತ್ತದೆ. ಇದು ಮೂಗಿನ ಊತವನ್ನು ಕಡಿಮೆ ಮಾಡುತ್ತದೆ ಮತ್ತು ಉಸಿರಾಟವನ್ನು ಸುಲಭಗೊಳಿಸುತ್ತದೆ.
ತುಳಸಿ ಕಷಾಯ
ತುಳಸಿ ಗಿಡ ಪ್ರತಿ ಮನೆಯಲ್ಲೂ ಇರುತ್ತದೆ. ತುಳಸಿ ಎಲೆಗಳಿಂದ ತಯಾರಿಸಿದ ಕಷಾಯವನ್ನು ಬಿಸಿಯಾಗಿ ಕುಡಿಯುವುದರಿಂದ ಸೀನನ್ನು ತಡೆಯಬಹುದು. ತುಳಸಿ ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
ಶುಂಠಿ ರಸ ಮತ್ತು ಜೇನುತುಪ್ಪ
ಶುಂಠಿ ಮತ್ತು ಜೇನುತುಪ್ಪ ಇವೆರಡೂ ಪ್ರತಿ ಅಡುಗೆ ಮನೆಯಲ್ಲೂ ಇರುತ್ತವೆ. ಶುಂಠಿಯ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸುವುದರಿಂದ ಸೀನುವಿಕೆ ಕಡಿಮೆಯಾಗುತ್ತದೆ. ಇದು ಕೆಮ್ಮು ಮತ್ತು ಉಸಿರಾಟದ ತೊಂದರೆಗಳನ್ನು ಸಹ ನಿವಾರಿಸುತ್ತದೆ.
ನಿಂಬೆ ರಸ ಮತ್ತು ಜೇನುತುಪ್ಪ
ನಿಂಬೆರಸ ಮತ್ತು ಜೇನುತುಪ್ಪವನ್ನು ಬೆರೆಸಿ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ಸೀನುವಿಕೆಯನ್ನು ನಿಲ್ಲಿಸಲು ಸಹಾಯ ಮಾಡುತ್ತದೆ. ದಿನಕ್ಕೆ 2 ರಿಂದ 3 ಬಾರಿ ಈ ಮಿಶ್ರಣವನ್ನು ಸೇವಿಸಿದರೆ ಸೀನುವಿಕೆಯಿಂದ ಪರಿಹಾರ ಪಡೆಯಬಹುದು.
ಚಳಿಗಾಲದಲ್ಲಿ ಸೀನುವಿಕೆಯ ಅಪಾಯವು ತುಂಬಾ ಹೆಚ್ಚಾಗಿರುತ್ತದೆ. ತಂಪಾದ ಗಾಳಿಯಲ್ಲಿ ಹೆಚ್ಚು ಹೊರಗೆ ಹೋಗಬೇಡಿ. ಇಬ್ಬನಿ ಬೀಳುವ ಸಮಯದಲ್ಲಿ ಕೂಡ ಹೊರಗೆ ಹೋಗದೇ ಇರುವುದು ಉತ್ತಮ.