ಬೆಳಗಾವಿ : ಬೆಳಗಾವಿಯಲ್ಲಿ ಡಬಲ್ ಮರ್ಡರ್ ಪ್ರಕರಣ ನಡೆದಿದ್ದು, ಹೆಂಡತಿ ಮತ್ತು ಪ್ರಿಯಕರನನ್ನು ಗಂಡನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಹೊರ ವಲಯದಲ್ಲಿ ಘಟನೆ ನಡೆದಿದು, ಮದುವೆಯಾಗಿ ಒಂದು ತಿಂಗಳಲ್ಲೇ ಹೆಂಡತಿ ಪ್ರಿಯಕರನೊಂದಿಗೆ ಪರಾರಿಯಾಗಿದ್ದಳು. ಹೀಗಾಗಿ ಹೆಂಡತಿ ಹಾಗೂ ಅವಳ ಪ್ರಿಯಕರನನ್ನು ಹತ್ಯೆ ಮಾಡಿದ್ದಾನೆ.
ತೌಫಿಕ್ ಕ್ಯಾಡಿ (24) ಎಂಬಾತ ತನ್ನ ಪತ್ನಿ ಹೀನಾಕೌಸರ್ ಸುದಾರಾಣೆ (19) ಹಾಗೂ ಯಾಸಿನ ಬಾಗೊಡೆ (21) ಕೊಲೆ ಮಾಡಿದ್ದಾನೆ. ಈ ವೇಳೆ ತಾಯಿ ಅಮಿನಾಬಾಯಿ ಬಾಗೂಡ ಹಾಗೂ ಮಾವ ಮುಸ್ತಫಾ ಮುಲ್ಲಾನ ಮೇಲು ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಕೊಲೆ ಮಾಡಿದ ತೌಫಿಕ್ ಕ್ಯಾಡಿ ಪರಾರಿಯಾಗಿದ್ದಾನೆ.