HomeEntertainmentಶಿವರಾತ್ರಿಯಂದು ತೆರೆ ಮೇಲೆ ಬರಲಿದೆ ಗೋಪಿಚಂದ್ ಅಭಿನಯದ 'ಭೀಮಾ'

ಶಿವರಾತ್ರಿಯಂದು ತೆರೆ ಮೇಲೆ ಬರಲಿದೆ ಗೋಪಿಚಂದ್ ಅಭಿನಯದ ‘ಭೀಮಾ’

ಸ್ಯಾಂಡಲ್ವುಡ್ ನ ಖ್ಯಾತ ನಿರ್ದೇಶಕ ಎ. ಹರ್ಷ ಆಕ್ಷನ್ ಕಟ್ ಹೇಳಿರುವ ಗೋಪಿಚಂದ್ ಅಭಿನಯದ ‘ಭೀಮಾ’ ಚಿತ್ರ ಫೆಬ್ರವರಿ 16 ರಂದು ತೆರೆ ಮೇಲೆ ಬರಲು ಸಜ್ಜಾಗಿತ್ತು. ಇದೀಗ ಚಿತ್ರದಂಡ ಬಿಡುಗಡೆ ದಿನಾಂಕವನ್ನು ಬದಲಾವಣೆ ಮಾಡಿದ್ದು, ಮಾರ್ಚ್ 8 ಶಿವರಾತ್ರಿಯ ದಿನದಂದು ಸಿನಿಮಾ ಬಿಡುಗಡೆಯಾಗಲಿದೆ.

ಈ ಚಿತ್ರದಲ್ಲಿ ಗೋಪಿಚಂದ್ ಸೇರಿದಂತೆ ಪ್ರಿಯಾ ಭವಾನಿ ಶಂಕರ್, ಮಾಳವಿಕಾ ಶರ್ಮ, ವೆನಿಲಾ ಕಿಶೋರ್, ರಘು ಬಾಬು, ಮುಖೇಶ್ ತಿವಾರಿ ತೆರೆ ಹಂಚಿಕೊಂಡಿದ್ದಾರೆ.

ಶ್ರೀ ಸತ್ಯ ಸಾಯ್ ಆರ್ಟ್ಸ್ ಬ್ಯಾನರ್ ನಡಿ ರಾಧಾ ಮೋಹನ್ ನಿರ್ಮಾಣ ಮಾಡಿದ್ದಾರೆ. ತಮ್ಮಿ ರಾಜು ಸಂಕಲನವಿದ್ದು, ಸ್ವಾಮಿಗೌಡ ಛಾಯಾಗ್ರಹಣವಿದೆ. ಕೆಜಿಎಫ್ ನ ಸಂಗೀತ ನಿರ್ದೇಶಕ ರವಿ ಬಸ್ರೂರ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular