HomeIndiaBIG NEWS: ಕಲ್ಕಾಜಿ ಮಂದಿರದಲ್ಲಿ ಅವಘಡ; ಜಾಗರಣೆ ವೇಳೆ ವೇದಿಕೆ ಕುಸಿದು ಓರ್ವ ಸಾವು; 15...

BIG NEWS: ಕಲ್ಕಾಜಿ ಮಂದಿರದಲ್ಲಿ ಅವಘಡ; ಜಾಗರಣೆ ವೇಳೆ ವೇದಿಕೆ ಕುಸಿದು ಓರ್ವ ಸಾವು; 15 ಜನರಿಗೆ ಗಂಭೀರ ಗಾಯ

ನವದೆಹಲಿ: ದೇವಾಲಯದಲ್ಲಿ ಜಾಗರಣೆ ವೇಳೆ ವೇದಿಕೆ ಕುಸಿದು ಬಿದ್ದು ಓರ್ವ ಸಾವನ್ನಪ್ಪಿದ್ದು, 15 ಜನರು ಗಾಯಗೊಂಡಿರುವ ಘಟನೆ ದೆಹಲಿಯ ಕಲ್ಕಾಜಿ ಮಂದಿರದಲ್ಲಿ ನಡೆದಿದೆ.

ಕಲ್ಕಾಜಿ ಮಂದಿರದ ಜಾಗರಣೆಯಲ್ಲಿ ಖ್ಯತ ಗಾಯಕರ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜನಪ್ರಿಯ ಗಾಯಕರನ್ನು ನೋಡಲು ಜನರು ವೇದಿಕೆಯತ್ತ ಧಾವಿಸಿ ವೇದಿಕೆ ಮೇಲೆ ಹತ್ತಿದ್ದಾರೆ. ಈ ವೇಳೆ ವೇದಿಕೆ ಏಕಾಏಕಿ ಕುಸಿದು ಬಿದ್ದಿದೆ.

ಈ ವೇಳೆ ನೂಕು ನುಗ್ಗಲು, ಕಾಲ್ತುಳಿತ ಉಂಟಾಗಿದ್ದು, ಓರ್ವ ಸಾವನ್ನಪ್ಪಿದ್ದು 15 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಕ ಬಿ ಪ್ರಾಕ್ ವೇದಿಕೆಗೆ ಬರುತ್ತಿದ್ದಂತೆ ನೂಕು ನುಗ್ಗಲು ಉಂಟಾಗಿ ಜನರು ವೇದಿಕೆ ಹತ್ತಲು ಹೋಗಿ ವೇದಿಕೆ ಕುಸಿದು ಬಿದ್ದು ದುರಂತ ಸಂಭವಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular