ದಾವಣಗೆರೆ : ಗಣರಾಜ್ಯೋತ್ಸವ ದಿನವೇ ಶಾಲಾ ಮೈದಾನದ ಬಳಿ ಅನುಮಾನಾಸ್ಪದ ಸೂಟ್ ಕೇಸ್ ಪತ್ತೆಯಾಗಿದ್ದು, ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.
ದಾವಣಗೆರೆ ನಗರದ ಸರ್ಕಾರಿ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಸಾರ್ವಜನಿಕರು. ಸೂಟು ಕೇಸ್ ನಲ್ಲಿ ಬಾಂಬ್ ಇದೆ ಆತಂಕ ವ್ಯಕ್ತಪಡಿಸಿದ್ದು, ಬೆಳಗ್ಗೆಯಿಂದ ಬಿದ್ದಿದ್ದ ಸೂಟ್ ಕೇಸ್ ಕಂಡು ಕೊನೆಗೆ ಪೊಲೀಸರಿಗೆ ಮಾಹಿತಿ ನೀಡಿದರು.
ನಂತರ ಸ್ಥಳಕ್ಕೆ ಬಂದ ಪೊಲೀಸರು, ಡಾಗ್ ಸ್ಕಾಡ್ ತಂಡ ಪರಿಶೀಲನೆ ನಡೆಸಿದ್ದಾರೆ. ನಂತರ ಖಾಲಿ ಸೂಟ್ಕೇಸ್ ಎಂಬುದು ತಿಳಿದ ಬಳಿಕವೇ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ.