HomeKarnatakaಶಾಲೆಗೆ ಹೋಗುವಾಗಲೇ ಅಪಘಾತ: ಬಸ್ ಡಿಕ್ಕಿಯಾಗಿ ಬಾಲಕ ಸಾವು

ಶಾಲೆಗೆ ಹೋಗುವಾಗಲೇ ಅಪಘಾತ: ಬಸ್ ಡಿಕ್ಕಿಯಾಗಿ ಬಾಲಕ ಸಾವು

ಶಿವಮೊಗ್ಗ: ಬೈಕ್ ಡಿಕ್ಕಿಯಾಗಿ ಶಾಲಾ ಬಾಲಕ ಮೃತಪಟ್ಟ ಘಟನೆ ಶಿವಮೊಗ್ಗದ ಮಲವಗೊಪ್ಪದಲ್ಲಿ ನಡೆದಿದೆ. ಹೊಳೆಹೊನ್ನೂರು ಸಮೀಪದ ಸಿದ್ಲಿಪುರ ಗ್ರಾಮದ ಲೋಕೇಶ್ ಅವರ ಪುತ್ರ ಚಿರಂತ್(12) ಸ್ಥಳದಲ್ಲೇ ಮೃತಪಟ್ಟ ಬಾಲಕ.

ಗುರುವಾರ ಶಾಲಾ ವಾಹನ ಹತ್ತಲು ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಡಿಕ್ಕಿ ಹೊಡೆದು ಚಿರಂತ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸಿದ್ಲೀಪುರದ ಲೋಕೇಶ್ ಕೆಲಸದ ನಿಮಿತ್ತ ಮಲವಗೊಪ್ಪದಲ್ಲಿ ವಾಸವಾಗಿದ್ದರು. ಮೃತದೇಹವನ್ನು ಗ್ರಾಮಕ್ಕೆ ತಂದು ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಚಿರಂತ್ ಸಾವಿನಿಂದಾಗಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular