alex Certify BREAKING : ‘ಡ್ರೋನ್ ಪ್ರತಾಪ್’ ಗೆ ಮತ್ತೊಂದು ಸಂಕಷ್ಟ : ಕ್ವಾಲಿಟಿ ಇಲ್ಲದ ಡ್ರೋನ್ ಕೊಟ್ಟು ಲಕ್ಷಾಂತರ ರೂ. ದೋಖಾ ಆರೋಪ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ‘ಡ್ರೋನ್ ಪ್ರತಾಪ್’ ಗೆ ಮತ್ತೊಂದು ಸಂಕಷ್ಟ : ಕ್ವಾಲಿಟಿ ಇಲ್ಲದ ಡ್ರೋನ್ ಕೊಟ್ಟು ಲಕ್ಷಾಂತರ ರೂ. ದೋಖಾ ಆರೋಪ..!

ಬೆಂಗಳೂರು : ಬಿಗ್ ಬಾಸ್ ಸ್ಪರ್ಧಿ ‘ಡ್ರೋನ್ ಪ್ರತಾಪ್’ ಮತ್ತೊಂದು ದೋಖಾ ಕಹಾನಿ ಬಯಲಾಗಿದ್ದು, ಕ್ವಾಲಿಟಿ ಇಲ್ಲದ ಡ್ರೋನ್ ಕೊಟ್ಟು ಲಕ್ಷಾಂತರ ಹಣ ಮೋಸ ಮಾಡಿರುವ ಆರೋಪ ಕೇಳಿಬಂದಿದೆ.

ಹೌದು, ಮಹಾರಾಷ್ಟ್ರ ಮೂಲದ ವ್ಯಕ್ತಿ ಓರ್ವರಿಂದ ಸುಮಾರು 35 ಲಕ್ಷ 75 ಸಾವಿರ ಹಣ ಪಡೆದು ಕ್ವಾಲಿಟಿ ಇಲ್ಲದ ಹಾಗೂ ಸರಿಯಾಗಿ ಕೆಲಸ ಮಾಡದ ಡ್ರೋನ್ ಗಳನ್ನು ನೀಡಿ ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ . ಪ್ರತಾಪ್ ಬ್ಯುಸಿನೆಡ್ ಪಾರ್ಟ್ನರ್ ಸಾರಂಗ ಮಾನ್ ಎಂಬುವವರು ಈ ಆರೋಪ ಮಾಡಿದ್ದಾರೆ. ಈ ಮೂಲಕ ಪ್ರತಾಪ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

8 ತಿಂಗಳ ಹಿಂದೆ ಡ್ರೋನ್ ಪ್ರತಾಪ್ ಗೆ ನಾನು 35, 75,000 ರೂ ಹಣ ನೀಡಿದ್ದೆ, ಆದರೆ ಪ್ರತಾಪ್ ನನಗೆ ಸರಿಯಾದ ಡ್ರೋನ್ ನೀಡಲಿಲ್ಲ. ಡ್ರೋನ್ ಕ್ವಾಲಿಟಿ, ಗುಣಮಟ್ಟ ಸರಿಯಿಲ್ಲ ಎಂದು ಸಾರಂಗ್ ಆರೋಪ ಮಾಡ್ತಿದ್ದಾರೆ. ಇದಾದ ಬಳಿಕ 4 ಡ್ರೋನ್ ಗಳನ್ನು ಪ್ರತಾಪ್ ನೀಡಿದ್ದರು, ಆದರೆ ಅದು ಕೂಡ ಸರಿಯಿಲ್ಲ, ಸರಿಯಾಗಿ ಕೆಲಸ ಮಾಡುತ್ತಿಲ್ಲ. ಡ್ರೋನ್ ಹಾರಿಸಿದರೆ ಮೇಲೆ ಹಾರದೆ ಕೆಳಗೆ ಬಿದ್ದು ಹೋಗುತ್ತಿದೆ, ನನಗೆ ಪ್ರತಾಪ್ ಮೋಸ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಡ್ರೋನ್ ಪ್ರತಾಪ್ ಗೆ ಮತ್ತೊಂದು ಸಂಕಷ್ಟ..!

ಈಗಾಗಲೇ ಬಿಗ್ ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ಗೆ ಮತ್ತೊಂದು ಸಂಕಷ್ಟದಲ್ಲಿದ್ದು, ಕೋರ್ಟ್ ನಿಂದ ಸಮನ್ಸ್ ಕೂಡ ಜಾರಿಯಾಗಿದೆ.ಬಿಗ್ ಬಾಸ್’ ಸ್ಪರ್ಧಿ ಡ್ರೋನ್ ಪ್ರತಾಪ್ ವಿರುದ್ಧ 2.50 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಲಾಗಿದೆ. ಈ ಸಂಬಂಧ ಕೋರ್ಟ್ ನಿಂದ ಸಮನ್ಸ್ ಜಾರಿಯಾಗಿದ್ದು, ಫೆ.20 ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ. ಕೋವಿಡ್ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳು ತನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ಡ್ರೋನ್ ಪ್ರತಾಪ್ ಹೇಳಿದ್ದರು. ಕ್ವಾರಂಟೈನ್ ಸಮಯದಲ್ಲಿ ಅಧಿಕಾರಿಯೊಬ್ಬರು ನನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದರು. ತಲೆಗೆ ಹೊಡೆದು ತೊಂದರೆ ಕೊಟ್ಟಿದ್ದರು. ಹುಚ್ಚ ಎಂದು ಹೇಳಿದ್ದರು. ಅಲ್ಲದೇ ಹುಚ್ಚ ಅಂತ ಪೇಪರ್ ಗೆ ಸಹಿ ಹಾಕು ಎಂದು ಒತ್ತಾಯಿಸಿದ್ದರು ಎಂದು ಪ್ರತಾಪ್ ಬಿಬಿಎಂಪಿ ನೋಡಲ್ ಅಧಿಕಾರಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು.

ಈ ಸಂಬಂಧ ಪ್ರಯಾಗ್ ರಾಜ್ ಎಂಬುವವರು 50 ಲಕ್ಷ ರೂ. ಮಾನನಷ್ಟ ಮೊಕದ್ದಮೆ ಹಾಗೂ ಮತ್ತೊಬ್ಬ ಅಧಿಕಾರಿ 2 ಕೋಟಿ ರೂ. ಮೊಕದ್ದಮೆ ಹೂಡಿದ್ದರು.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...