ಅಹಿತಕರ ಘಟನೆಗಳಿಗಾಗಿ ದೆಹಲಿ ಮೆಟ್ರೋ ಸಾಕಷ್ಟು ಬಾರಿ ಹೆಡ್ ಲೈನ್ ಆಗ್ತಿದೆ. ಇದೀಗ ಮತ್ತೊಂದು ಘಟನೆಯಲ್ಲಿ ದೆಹಲಿ ಮೆಟ್ರೋ ನಿಲ್ದಾಣವೊಂದರಲ್ಲಿ ಯುವ ಜೋಡಿಯೊಂದು ಪ್ರಣಯದಲ್ಲಿ ತೊಡಗಿಕೊಂಡಿದ್ದು ವಿಡಿಯೋ ವೈರಲ್ ಆಗಿದೆ. ಯಮುನಾ ಬ್ಯಾಂಕ್ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಈ ಘಟನೆಯನ್ನು ವಿಡಿಯೋ ರೆಕಾರ್ಡ್ ಮಾಡಿದ್ದಾರೆ.
ವೈರಲ್ ವೀಡಿಯೊದಲ್ಲಿ ಮೆಟ್ರೋ ನಿಲ್ದಾಣದಲ್ಲಿ ಜೋಡಿಯೊಂದು ಪರಸ್ಪರ ತಬ್ಬಿಕೊಂಡು ಚುಂಬಿಸುತ್ತಿದೆ. ತಮ್ಮ ಈ ಕೃತ್ಯ ರೆಕಾರ್ಡ್ ಆಗುತ್ತಿದೆ ಎಂದು ಗಮನಿಸಿದ ಯುವತಿ ತನ್ನ ಗೆಳೆಯನಿಂದ ದೂರ ಸರಿಯಲು ಪ್ರಯತ್ನಿಸುತ್ತಾಳೆ. ಆದಾಗ್ಯೂ ಆಕೆಯ ಗೆಳೆಯ, ಯುವತಿಯನ್ನು ತನ್ನ ತೋಳುಗಳಿಂದ ಸುತ್ತುವರಿದು ಬಿಗಿಯಾಗಿ ಹಿಡಿದುಕೊಳ್ಳುತ್ತಾನೆ. ಬಳಿಕ ಅವರಿಬ್ಬರ ಪ್ರಣಯ ಮುಂದುವರೆಯುತ್ತದೆ.
ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿದೆಯೇ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಆದರೆ ದೆಹಲಿ ಮೆಟ್ರೋದಲ್ಲಿ ಇಂತಹ ಪ್ರಣಯದಾಟಗಳು ಜಾಸ್ತಿಯಾಗ್ತಿದ್ರು ಮೆಟ್ರೋ ನಿಗಮಕ್ಕೆ ತಲೆನೋವಾಗಿ ಪರಿಣಮಿಸಿದೆ.
ಇದಕ್ಕೂ ಮುನ್ನ ಜನವರಿ 21 ರಂದು ದೆಹಲಿ ಮೆಟ್ರೋದಲ್ಲಿ ಹುಡುಗ ಮತ್ತು ಹುಡುಗಿ ಪ್ರಣಯದಲ್ಲಿ ತೊಡಗಿದ್ದ ಮತ್ತೊಂದು ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿತ್ತು. ಇದರ ಜೊತೆಯಲ್ಲಿ ಪ್ರಯಾಣಿಕರು ಮತ್ತು ಇನ್‌ಸ್ಟಾಗ್ರಾಮ್ ರೀಲ್ ಮಾಡುವ ಜನರ ನಡುವೆ ಜಗಳಗಳು ಅಥವಾ ರೈಲಿನೊಳಗೆ ಅನುಚಿತ ವರ್ತನೆಯಲ್ಲಿ ತೊಡಗಿರುವ ಘಟನೆಗಳು ಆಗಾಗ್ಗೆ ನಡೆಯುತ್ತಿವೆ.
https://twitter.com/lavelybakshi/status/1749425697993498919?ref_src=twsrc%5Etfw%7Ctwcamp%5Etweetembed%7Ctwterm%5E1749425697993498919%7Ctwgr%5E1eb4910718d1dcaa9dfcfe40bb321d1a6e733fb4%7Ctwcon%5Es1_&ref_url=https%3A%2F%2Fwww.freepressjournal.in%2Findia%2Fdelhi-metro-passenger-records-couple-hugging-and-kissing-each-other-at-yamuna-bank-station-video-of-pda-goes-viral