HomeKarnatakaBIG NEWS : ರಾಜ್ಯ ಸರ್ಕಾರದಿಂದ ʻಅನಧಿಕೃತʼ ಶಾಲೆಗಳ ವಿರುದ್ಧ ಮಹತ್ವದ ಕ್ರಮ : 1,695...

BIG NEWS : ರಾಜ್ಯ ಸರ್ಕಾರದಿಂದ ʻಅನಧಿಕೃತʼ ಶಾಲೆಗಳ ವಿರುದ್ಧ ಮಹತ್ವದ ಕ್ರಮ : 1,695 ಶಾಲೆಗಳು ಮುಚ್ಚುವಂತೆ ಸುತ್ತೋಲೆ

ಬೆಂಗಳೂರು :   ರಾಜ್ಯ ಸರ್ಕಾರದಿಂದ  ʻಅನಧಿಕೃತʼ ಶಾಲೆಗಳ ವಿರುದ್ಧ ಮಹತ್ವದ ಕ್ರಮ ಕೈಗೊಂಡಿದ್ದು, 1,695 ಶಾಲೆಗಳು ಮುಚ್ಚುವಂತೆ ಸುತ್ತೋಲೆ ಹೊರಡಿಸಿದೆ.

ಅನಧಿಕೃತ ಶಾಲೆಗಳಿಗೆ ವಿದ್ಯಾರ್ಥಿಗಳು ದಾಖಲಾಗದಂತೆ ನೋಡಿಕೊಳ್ಳಲು 2023-24ನೇ ಶೈಕ್ಷಣಿಕ ವರ್ಷದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮೂರು ಸುತ್ತೋಲೆ ಹೊರಡಿಸಿದೆ.

ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ, ಅನಧಿಕೃತ ಶಾಲೆಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಸೂಚನೆ ನೀಡಿ, ಅನಧಿಕೃತ ಶಾಲೆಗಳ ಪಟ್ಟಿ ಬಿಡುಗಡೆ ಮಾಡಿ ಅಲ್ಲಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆಯದಂತೆ ನಿರ್ಬಂಧಿಸಬೇಕು. ಈ ಜವಾಬ್ದಾರಿ ಇಲಾಖೆಯ ಸ್ಥಳೀಯ ಅಧಿಕಾರಿಗಳದ್ದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular