ಸೂಪರ್ಮ್ಯಾನ್ ಮತ್ತು ಸ್ಪೈಡರ್ಮ್ಯಾನ್ ಸಿನೆಮಾಗಳನ್ನು ನೋಡಿ ಅಂಥದ್ದೇ ಸಾಹಸಿಗಳಾಗಬೇಕೆಂದು ಅನೇಕರು ಕನಸು ಕಂಡಿರ್ತಾರೆ. ಆದರೆ ಈ ಸಿನೆಮಾಗಳ ಹೀರೋಗಳನ್ನೂ ಮೀರಿಸುವಂತಹ ಸಾಹಸಿಗರು ನಮ್ಮಲ್ಲಿದ್ದಾರೆ. ನಿಜ ಜೀವನದಲ್ಲಿ ಸಹ ಮಹಾಶಕ್ತಿ ಹೊಂದಿರೋ ಸೂಪರ್ ಮ್ಯಾನ್ಗಳು ಇವರು. ಅವರ ಸಾಮರ್ಥ್ಯಗಳು ಯಾವುದೇ ಚಲನಚಿತ್ರದ ಫೈಟಿಂಗ್ ದೃಶ್ಯಗಳಿಗಿಂತ ಕಡಿಮೆಯೇನಿಲ್ಲ.
ಪ್ರಹ್ಲಾದ್ ಜಾನಿ
ಗುಜರಾತಿನ ಪ್ರಹ್ಲಾದ್ ಜಾನಿ ಎಂಬ ಯೋಗಿ ಬಾಬಾ ಆಹಾರವನ್ನೇ ಸೇವಿಸುವುದಿಲ್ಲ. ನೀರನ್ನು ಕೂಡ ಕುಡಿಯುವುದಿಲ್ಲ. 1940 ರಿಂದಲೂ ಪ್ರಹ್ಲಾದ್ ಜಾನಿ ನಿರಾಹಾರಿಯಾಗಿಯೇ ಬದುಕಿದ್ದಾರೆ. ಇದು ಹೇಗೆ ಸಾಧ್ಯ ಅನ್ನೋದು ವಿಜ್ಞಾನಿಗಳ ಪಾಲಿಗೂ ಉತ್ತರವಿಲ್ಲದ ಪ್ರಶ್ನೆ. ಬಗೆಹರಿಯದ ರಹಸ್ಯಗಳ ಪೈಕಿ ಇದು ಕೂಡ ಒಂದು.
ವಿಮ್ ಹಾಫ್
ಈತನನ್ನು ಸ್ನೋಮ್ಯಾನ್ ಎಂದೇ ಕರೆಯಬಹುದು. ವಿಮ್ ಹಾಫ್ ಎಂಬ ಈ ವ್ಯಕ್ತಿ ಆರಾಮಾಗಿ ಹಿಮದಲ್ಲಿ ಕುಳಿತುಕೊಳ್ಳುತ್ತಾರೆ. ಪರ್ವತಗಳನ್ನು ನಿರಾಯಾಸವಾಗಿ ಏರುತ್ತಾರೆ. ಅವರ ದೇಹದ ಶಾಖವು ಹೀಟರ್ನಂತೆಯೇ ಕೆಲಸ ಮಾಡುತ್ತದೆ. ಹಾಗಾಗಿ ಗಂಟೆಗಟ್ಟಲೆ ಹಿಮದಲ್ಲಿ ಕುಳಿತರೂ ಏನೂ ಆಗುವುದಿಲ್ಲ.
ನತಾಶಾ ಡೆಮ್ಕಿನಾ
ನತಾಶಾ ಡೆಮ್ಕಿನಾ ಎಂಬ ರಷ್ಯಾದ ಹುಡುಗಿಯ ಕಣ್ಣುಗಳು ಎಕ್ಸ್-ರೇಗಳಂತಿವೆ. ಮೂಳೆಗಳು, ಸ್ನಾಯುಗಳು, ಗಾಯಗಳು ಸಹ ಗೋಚರಿಸುವಂತೆ ಅವಳು ಜನರ ದೇಹದೊಳಕ್ಕೆ ನೋಡುವ ಸಾಮರ್ಥ್ಯ ಹೊಂದಿದ್ದಾಳೆ. ಕೇವಲ ಮುಖ ನೋಡಿ ರೋಗವನ್ನು ಪತ್ತೆ ಮಾಡಬಲ್ಲ ಸಾಮರ್ಥ್ಯ ಅವಳಲ್ಲಿದೆ. ಇದು ವೈದ್ಯರಿಗೂ ಅಚ್ಚರಿ ತಂದಿದೆ.
ಡೇನಿಯಲ್ ಬ್ರೌನಿಂಗ್ ಸ್ಮಿತ್
ಈತನನ್ನು ಮೂಳೆಗಳೇ ಇಲ್ಲದ ವ್ಯಕ್ತಿ ಎಂದೂ ಕರೆಯಬಹುದು. ಯಾಕಂದ್ರೆ ಡೇನಿಯಲ್ ಎಂತಹ ಆಸನಗಳನ್ನು ಬೇಕಾದರೂ ನಿರಾಯಾಸವಾಗಿ ಮಾಡಬಲ್ಲ. ಆತ ತನ್ನ ದೇಹವನ್ನು ಚೆಂಡಿನಂತೆ ಸುತ್ತಿಕೊಳ್ಳುತ್ತಾನೆ. ಈತನ ಮೂಳೆಗಳು ರಬ್ಬರ್ನಂತೆ ಕೆಲಸ ಮಾಡುತ್ತವೆ.
ಸ್ಟೀಫನ್ ವಿಲ್ಟ್ ಶೈರ್
ಸ್ಟೀಫನ್ ವಿಲ್ಟ್ ಶೈರ್ ಎಂಬ ಕಲಾವಿದನ ನೆನಪಿನ ಶಕ್ತಿ ಸೂಪರ್ ಕಂಪ್ಯೂಟರ್ ಇದ್ದಂತೆ. ಅವನು ಒಂದು ಸ್ಥಳವನ್ನು ಒಮ್ಮೆ ನೋಡಿ ಅದನ್ನು ಚಿತ್ರಿಸುತ್ತಾನೆ. ಇಡೀ ನಗರ, ಅಲ್ಲಿನ ಸಣ್ಣ ಸಣ್ಣ ವಸ್ತುಗಳು ಎಲ್ಲವನ್ನೂ ನೆನಪಿನಲ್ಲಿಟ್ಟುಕೊಂಡು ಅದನ್ನು ಕಾಗದದ ಮೇಲೆ ಅರಳಿಸುತ್ತಾರೆ. ಎಲ್ಲವೂ ಅವನ ದೃಷ್ಟಿಯಲ್ಲಿ ಸೆರೆಯಾಗುತ್ತವೆ.