ಚಿಕಾಗೋ : ಉತ್ತರ ಅಮೆರಿಕದ ಚಿಕಾಗೋ ನಗರದ ಉಪನಗರಗಳಲ್ಲಿ ಎರಡು ಮನೆಗಳಲ್ಲಿ ಎಂಟು ಜನರನ್ನು ಗುಂಡಿಕ್ಕಿ ಕೊಂದು ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ.
ಶಂಕಿತ ವ್ಯಕ್ತಿಗಾಗಿ ಪೊಲೀಸರು ಸೋಮವಾರ ಚಿಕಾಗೋ ಬಳಿ ಶೋಧ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ನಿವಾಸಗಳಲ್ಲಿ ಒಟ್ಟು 8 ಜನರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಇಲಿನಾಯ್ಸ್ನ ಜೋಲಿಯಟ್ನ ಪೊಲೀಸ್ ಮುಖ್ಯಸ್ಥ ಬಿಲ್ ಇವಾನ್ಸ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ರೋಮಿಯೋ ನಾನ್ಸ್ ಎಂಬ ಶಂಕಿತನನ್ನು ಹುಡುಕುತ್ತಿದ್ದೇವೆ” ಎಂದು ಅವರು ಹೇಳಿದರು.ಯುನೈಟೆಡ್ ಸ್ಟೇಟ್ಸ್ ನಲ್ಲಿ ಗುಂಡಿನ ದಾಳಿಗಳು ಸಾಮಾನ್ಯವಾಗಿದೆ, ಅಲ್ಲಿ ಜನರಿಗಿಂತ ಹೆಚ್ಚು ಬಂದೂಕುಗಳೇ ಇದೆ ಎಂದು ಮೂಲಗಳು ತಿಳಿಸಿದೆ.