ನವದೆಹಲಿ: ಅಪೂರ್ಣ KYC ಹೊಂದಿರುವ ಫಾಸ್ಟ್ ಟ್ಯಾಗ್ ಗಳು ಜನವರಿ 31 ರ ನಂತರ ನಿಷ್ಕ್ರಿಯವಾಗಲಿದೆ ಅಥವಾ ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ . ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯ ದಕ್ಷತೆಯನ್ನು ಹೆಚ್ಚಿಸಲು ಮತ್ತು ಟೋಲ್ ಪ್ಲಾಜಾಗಳಲ್ಲಿ ತಡೆರಹಿತ ಚಲನೆಯನ್ನು ಒದಗಿಸಲು, ಎನ್ಎಚ್ಎಐ (NHAI) ‘ಒಂದು ವಾಹನ, ಒಂದು ಫಾಸ್ಟ್ಯಾಗ್’ ಎಂಬ ನಿಯಮ ಜಾರಿಗೆ ತಂದಿದೆ.
ಬಳಕೆದಾರರು ತಮ್ಮ ಇತ್ತೀಚಿನ ಫಾಸ್ಟ್ ಟ್ಯಾಗ್ ನ KYC ಪೂರ್ಣಗೊಂಡಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಫಾಸ್ಟ್ ಟ್ಯಾಗ್ ಬಳಕೆದಾರರು ‘ಒಂದು ವಾಹನ, ಒಂದು ಫಾಸ್ಟ್ಟ್ಯಾಗ್’ ಅನ್ನು ಸಹ ಅನುಸರಿಸಬೇಕು ಮತ್ತು ಆಯಾ ಬ್ಯಾಂಕ್ಗಳ ಮೂಲಕ ಈ ಹಿಂದೆ ನೀಡಲಾದ ಎಲ್ಲಾ ಫಾಸ್ಟ್ ಟ್ಯಾಗ್ ಗಳನ್ನು ತ್ಯಜಿಸಬೇಕು. 31 ಜನವರಿ 2024 ರ ನಂತರ ಹಿಂದಿನ ಟ್ಯಾಗ್ ಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಅಥವಾ ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ.
ಇತ್ತೀಚಿನ ಫಾಸ್ಟ್ ಟ್ಯಾಗ್ ಖಾತೆ ಮಾತ್ರ ಸಕ್ರಿಯವಾಗಿರುತ್ತದೆ. ಹೆಚ್ಚಿನ ವಿವರಗಳಿಗೆ ಫಾಸ್ಟ್ ಟ್ಯಾಗ್ ಬಳಕೆದಾರರು ಹತ್ತಿರದ ಟೋಲ್ ಪ್ಲಾಜಾಗಳು ಅಥವಾ ಆಯಾ ವಿತರಕ ಬ್ಯಾಂಕ್ಗಳ ಟೋಲ್-ಫ್ರೀ ಗ್ರಾಹಕ ಸೇವಾ ಸಂಖ್ಯೆಯನ್ನು ಸಂಪರ್ಕಿಸಬಹುದು. ಆರ್ಬಿಐ ಆದೇಶವನ್ನು ಉಲ್ಲಂಘಿಸಿ ನಿರ್ದಿಷ್ಟ ವಾಹನಕ್ಕೆ ಬಹು ಫಾಸ್ಟ್ಟ್ಯಾಗ್ಗಳನ್ನು ನೀಡಲಾಗಿದೆ ಮತ್ತು ಕೆವೈಸಿ ಇಲ್ಲದೆ ಫಾಸ್ಟ್ಟ್ಯಾಗ್ಗಳನ್ನು ನೀಡಲಾಗಿದೆ ಎಂಬ ಇತ್ತೀಚಿನ ವರದಿಗಳ ನಂತರ ಎನ್ಎಚ್ಎಐ ಈ ಕ್ರಮ ಕೈಗೊಂಡಿದೆ.