ಜಾಲತಾಣದಲ್ಲಿ ಧೂಳೆಬ್ಬಿಸಿದ ಬಾಲ ‘ಬಬ್ರುವಾಹನ’ನ ವಿಡಿಯೋ

ವರನಟ ಡಾ. ರಾಜಕುಮಾರ್ ಅವರ ‘ಬಬ್ರುವಾಹನ’ ಚಿತ್ರದ ಡೈಲಾಗ್ ಕೇಳದವರೇ ಇಲ್ಲ. ಅನೇಕರು ಸಮಯ ಸಂದರ್ಭಕ್ಕೆ ತಕ್ಕಂತೆ ಈ ಸಂಭಾಷಣೆ ಹೇಳುತ್ತಾರೆ.

ಪುಟಾಣಿಯೊಬ್ಬ ಹೇಳಿರುವ ‘ಬಬ್ರುವಾಹನ’ ಚಿತ್ರದ ಡೈಲಾಗ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲಕ್ಷಾಂತರ ಜನ ವಿಡಿಯೋ ವೀಕ್ಷಿಸಿದ್ದಾರೆ. ಸಹಸ್ರಾರು ಸಂಖ್ಯೆಯ ಜನ ಲೈಕ್. ಕಮೆಂಟ್ಸ್ ಮಾಡಿದ್ದಾರೆ. 1.7 ಮಿಲಿಯನ್ ಗೂ ಅಧಿಕ ವ್ಯೂಸ್ ಕಂಡಿದೆ. 13 ಸಾವಿರಕ್ಕೂ ಅಧಿಕ ಜನ ವಿಡಿಯೋ ಶೇರ್ ಮಾಡಿದ್ದಾರೆ. ಜಾಲತಾಣದಲ್ಲಿ ಬಾಲ ಬಬ್ರುವಾಹನನ ವಿಡಿಯೋ ಹಲ್ ಚಲ್ ಸೃಷ್ಟಿಸಿದೆ.

ರಾಜಕುಮಾರ್ ಅವರು ಅರ್ಜುನ ಮತ್ತು ಬಬ್ರುವಾಹನ ಪಾತ್ರಧಾರಿಯಾಗಿ ಅಭಿನಯಿಸಿದ್ದು, ‘ಏನು ಪಾರ್ಥ ಕೆಂಗಣ್ಣಿನಿಂದ ಕೆಕ್ಕರಿಸಿ ನೋಡಿ ನನ್ನನ್ನು ಗೆಲ್ಲಲಾರೆ…’ ಎನ್ನುವ ಡೈಲಾಗ್ ಕರ್ನಾಟಕದ ಮನೆ ಮಾತಾಗಿದೆ. ಬಾಲಕ ಈ ಡೈಲಾಗ್ ಅನ್ನು ನಿರರ್ಗಳವಾಗಿ ತನ್ನದೇ ಶೈಲಿಯಲ್ಲಿ ಹೇಳುವ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read