alex Certify ಮಗುವಿಗೆ ಆಂಟಿಬಯೊಟಿಕ್ಸ್ ನೀಡುವ ಮುನ್ನ ಹೆತ್ತವರಿಗೆ ತಿಳಿದಿರಲಿ ಈ ಸಂಗತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗುವಿಗೆ ಆಂಟಿಬಯೊಟಿಕ್ಸ್ ನೀಡುವ ಮುನ್ನ ಹೆತ್ತವರಿಗೆ ತಿಳಿದಿರಲಿ ಈ ಸಂಗತಿ…!

ಹವಾಮಾನ ಬದಲಾದಂತೆ ಮಕ್ಕಳಿಗೆ ಶೀತ ಮತ್ತು ಕೆಮ್ಮು ಕಾಣಿಸಿಕೊಳ್ಳುವುದು ಸಾಮಾನ್ಯ. ವಿಶೇಷವಾಗಿ ಚಳಿಗಾಲದಲ್ಲಿ ವೈರಲ್ ಸೋಂಕು ಮತ್ತು ಜ್ವರ ಕೂಡ ಮಕ್ಕಳನ್ನು ಕಾಡುತ್ತದೆ. ವೈದ್ಯರು ಇದಕ್ಕೆ ಉಳಿದ ಔಷಧಿಗಳ ಜೊತೆಗೆ ಎಂಟಿಬಯೊಟಿಕ್ಸ್‌ ಸಹ ನೀಡುತ್ತಾರೆ. ಎಂಟಿಬಯೊಟಿಕ್ಸ್‌ನಿಂದ ತ್ವರಿತ ಪರಿಣಾಮವೇನೋ ಕಾಣಿಸುತ್ತದೆ. ಆದರೆ ಅವುಗಳಿಂದ ಮಕ್ಕಳ ಮೇಲೆ ಸಾಕಷ್ಟು ಅಡ್ಡ ಪರಿಣಾಮಗಳಾಗುತ್ತವೆ. ಆ್ಯಂಟಿಬಯೋಟಿಕ್‌ಗಳ ಅತಿಯಾದ ಬಳಕೆ ಅಪಾಯಕಾರಿ.

ಮಗುವಿಗೆ ಆ್ಯಂಟಿಬಯೋಟಿಕ್‌ ಕೊಡುವ ಮುನ್ನ ಅದರ ಅಡ್ಡಪರಿಣಾಮಗಳನ್ನು ಹೆತ್ತವರು ತಿಳಿದುಕೊಂಡಿರಬೇಕು. ವೈದ್ಯರ ಸಲಹೆಯಿಲ್ಲದೆ ಪದೇ ಪದೇ ಮಗುವಿಗೆ ಹೆಚ್ಚು ಆ್ಯಂಟಿಬಯೋಟಿಕ್ ನೀಡುವುದು ಮತ್ತಷ್ಟು ಅಪಾಯಕಾರಿ.

ಮಗುವಿಗೆ ಅತಿಯಾದ ಪ್ರಮಾಣದಲ್ಲಿ ಆ್ಯಂಟಿಬಯೋಟಿಕ್‌ಗಳನ್ನು ನೀಡಿದರೆ ದೇಹದಲ್ಲಿರುವ ಆರೋಗ್ಯಕರ ಬ್ಯಾಕ್ಟೀರಿಯಾಗಳು ಸಹ ನಾಶವಾಗುತ್ತವೆ. ಆರೋಗ್ಯಕರ ಬ್ಯಾಕ್ಟೀರಿಯಾಗಳು ಮಗು ಆರೋಗ್ಯವಾಗಿರಲು ಅತ್ಯಂತ ಅವಶ್ಯಕ. ಈ ಬ್ಯಾಕ್ಟೀರಿಯಾಗಳು ನಾಶವಾದಾಗ ಮಗುವಿಗೆ ಅನೇಕ ಆರೋಗ್ಯ ಸಂಬಂಧಿತ ಕಾಯಿಲೆಗಳು ಬರುವ ಅಪಾಯವಿರುತ್ತದೆ.

ಮಗುವಿಗೆ ಹೆಚ್ಚು ಆ್ಯಂಟಿಬಯೋಟಿಕ್‌ಗಳನ್ನು ನೀಡಿದರೆ ಪ್ರತಿಜೀವಕ ಪ್ರತಿರೋಧದ ಸಮಸ್ಯೆಯನ್ನು ಎದುರಿಸಬಹುದು. ಸ್ವಲ್ಪ ಸಮಯದ ನಂತರ ಆ ಔಷಧವು ದೇಹದ ಮೇಲೆ ಪರಿಣಾಮ ಬೀರುವುದನ್ನು ನಿಲ್ಲಿಸುತ್ತದೆ. ಇದನ್ನು ಪ್ರತಿಜೀವಕ ಪ್ರತಿರೋಧ ಎಂದು ಕರೆಯಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಮಗು ತುಂಬಾ ಅನಾರೋಗ್ಯಕ್ಕೆ ಒಳಗಾದಾಗ, ಈ ಔಷಧಿಗಳು ಪರಿಣಾಮ ಬೀರುವುದಿಲ್ಲ.

ಪ್ರತಿಜೀವಕಗಳು ಮಗುವಿನ ಜೀರ್ಣಾಂಗ ವ್ಯವಸ್ಥೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಇದು ಮಗುವಿನ ಬೆಳವಣಿಗೆಗೆ ಸಹ ಅಡ್ಡಿಯಾಗಬಹುದು. ಈ ಔಷಧಿಗಳಿಂದಾಗಿ ಮಗುವಿನ ದೇಹವು ಪೋಷಕಾಂಶಗಳನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಮತ್ತು ಮಗುವಿನ ಬೆಳವಣಿಗೆಯು ನಿಲ್ಲುತ್ತದೆ.

ಅತಿ ಹೆಚ್ಚು ಪ್ರತಿಜೀವಕಗಳನ್ನು ನೀಡುವುದರಿಂದ ಮಗುವಿನ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ಸೋಂಕು ಮತ್ತು ಬ್ಯಾಕ್ಟೀರಿಯಾದ ಕಾರಣದಿಂದಾಗಿ ಮಗು ಆಗಾಗ್ಗೆ ಮತ್ತು ತ್ವರಿತವಾಗಿ ಅನಾರೋಗ್ಯಕ್ಕೆ ಒಳಗಾಗುತ್ತದೆ.

ಮಕ್ಕಳಿಗೆ ಅತಿ ಹೆಚ್ಚು ಆ್ಯಂಟಿಬಯೋಟಿಕ್ಸ್ ನೀಡುವುದರಿಂದ  ಹೊಟ್ಟೆಯ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಇದು ಅತಿಸಾರಕ್ಕೆ ಕಾರಣವಾಗಬಹುದು. ಇಂತಹ ಔಷಧಗಳನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ಅಸಿಡಿಟಿಯಂತಹ ಸಮಸ್ಯೆಗಳೂ ಉಂಟಾಗಬಹುದು. ಆದ್ದರಿಂದ ವೈದ್ಯರ ಸಲಹೆ ಇಲ್ಲದೇ ಆ್ಯಂಟಿಬಯೋಟಿಕ್‌ಗಳನ್ನು ಕೊಡಬೇಡಿ.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...