ಸಾಮಾನ್ಯವಾಗಿ ಊಟವಾದ ತಕ್ಷಣ ಎಲ್ಲರೂ ಹಲ್ಲುಗಳನ್ನು ಸ್ವಚ್ಛಮಾಡಲು ಟೂತ್‌ಪಿಕ್ ಬಳಸ್ತಾರೆ. ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಕೂಡ ಟೂತ್‌ಪಿಕ್‌ಗಳನ್ನು ಇಟ್ಟಿರುತ್ತಾರೆ. ಹಲ್ಲುಗಳಲ್ಲಿ ಸಿಕ್ಕಿಹಾಕಿಕೊಂಡಿರೋ ಆಹಾರ, ಕೊಳೆಯನ್ನು ತೆಗೆಯಲು ಟೂತ್‌ಪಿಕ್ ಸಹಾಯ ಮಾಡುತ್ತದೆ.
ಆದರೆ ಟೂತ್‌ಪಿಕ್ ಅನ್ನು ಅತಿಯಾಗಿ ಬಳಸುವುದರಿಂದ ಹಲ್ಲುಗಳು ಒಳಗಿನಿಂದ ದುರ್ಬಲವಾಗಿಬಿಡುತ್ತವೆ. ಹಲ್ಲಿಗೆ ಸಂಬಂಧಪಟ್ಟ ಅನೇಕ ರೀತಿಯ ಸಮಸ್ಯೆಗಳು ಟೂತ್‌ಪಿಕ್ ಬಳಕೆಯಿಂದ ಬರಬಹುದು.
ಒಸಡು ದುರ್ಬಲವಾಗುವುದು
ಟೂತ್‌ಪಿಕ್ ಅನ್ನು ಅತಿಯಾಗಿ ಬಳಸುವುದರಿಂದ ಒಸಡುಗಳು ದುರ್ಬಲವಾಗುತ್ತವೆ. ಮರದಿಂದ ಮಾಡಿದ ಟೂತ್‌ಪಿಕ್ ತುಂಬಾ ಗಟ್ಟಿಯಾಗಿರುತ್ತದೆ, ಒಸಡುಗಳಿಗೆ ಇದು ಹಾನಿ ಮಾಡುತ್ತದೆ. ಅನೇಕ ಬಾರಿ ಒಸಡುಗಳಲ್ಲಿ ರಕ್ತಸ್ರಾವ ಕೂಡ ಆಗಬಹುದು. ಪದೇ ಪದೇ ಟೂತ್‌ಪಿಕ್ ಬಳಸುವುದರಿಂದ ಹಲ್ಲುಗಳ ಹೊಳಪು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಇದು ಹಲ್ಲು ಮತ್ತು ಒಸಡುಗಳಿಗೆ ಗಂಭೀರ ಹಾನಿಯನ್ನುಂಟುಮಾಡುತ್ತದೆ.
ಹಲ್ಲುಗಳ ನಡುವಿನ ಅಂತರ ಹೆಚ್ಚಳ
ಟೂತ್‌ಪಿಕ್ ಬಳಸಿ ಹಲ್ಲುಗಳನ್ನು ಸ್ವಚ್ಛಮಾಡುವುದರಿಂದ ಹಲ್ಲುಗಳ ನಡುವಿನ ಅಂತರವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಕ್ರಮೇಣ ಈ ಅಂತರವು ಹೆಚ್ಚಾಗಿ ನಿಮ್ಮ ಲುಕ್ ಕೂಡ ಹಾಳಾಗಬಹುದು. ಅಷ್ಟೇ ಅಲ್ಲ ಹಲ್ಲುಗಳ ಮಧ್ಯೆ ಆಹಾರ ಸಿಕ್ಕಿಹಾಕಿಕೊಳ್ಳುವ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಆಹಾರವು ಹಲ್ಲುಗಳಲ್ಲಿ ಸಿಲುಕಿಕೊಳ್ಳುವುದರಿಂದ ಹಲ್ಲುಗಳಲ್ಲಿ ಕುಳಿಗಳು ರೂಪುಗೊಳ್ಳಲು ಪ್ರಾರಂಭಿಸುತ್ತವೆ. ನಂತರ ಹಲ್ಲುಗಳು ಕ್ರಮೇಣ ಕೊಳೆಯುತ್ತವೆ.
ಹಲ್ಲುಗಳಲ್ಲಿ ದೌರ್ಬಲ್ಯ
ಟೂತ್‌ಪಿಕ್ ಅನ್ನು ಮತ್ತೆ ಮತ್ತೆ ಬಳಸಿದರೆ ಹಲ್ಲುಗಳ ನಡುವೆ ಅಂತರ ಉಂಟಾಗಿ ಆಹಾರವು ಅದರಲ್ಲಿ ಸಿಲುಕಿಕೊಳ್ಳುತ್ತದೆ. ಇದರಿಂದ ಹಲ್ಲುಗಳ ದಂತಕವಚ ಪದರಕ್ಕೆ ಗಂಭೀರ ಹಾನಿ ಉಂಟಾಗುತ್ತದೆ. ಈ ಕಾರಣದಿಂದಾಗಿ ಹಲ್ಲುಗಳು ಕ್ರಮೇಣ ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ.
ಒಸಡುಗಳಲ್ಲಿ ರಕ್ತಸ್ರಾವ
ಟೂತ್‌ಪಿಕ್ ಬಳಕೆಯಿಂದ ಅನೇಕ ಬಾರಿ ಒಸಡುಗಳು ಗಾಯಗೊಳ್ಳುತ್ತವೆ. ರಕ್ತಸ್ರಾವ ಪ್ರಾರಂಭವಾಗುತ್ತದೆ. ಇದರಿಂದಾಗಿ ನೀವು ಭವಿಷ್ಯದಲ್ಲಿ ಸಮಸ್ಯೆಗಳನ್ನು ಎದುರಿಸಬಹುದು.
ಹಲ್ಲಿನ ಬೇರುಗಳಿಗೆ ಹಾನಿ
ಟೂತ್‌ಪಿಕ್‌ನ ಅತಿಯಾದ ಬಳಕೆಯು ಹಲ್ಲುಗಳ ಬೇರುಗಳನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ ಅದರ ಬಳಕೆಯನ್ನು ತಪ್ಪಿಸಿ.