HomeKarnatakaBIG NEWS: ಕನ್ನಡ ನಾಮಫಲಕ ಕಡ್ಡಾಯ: ಬಿಬಿಎಂಪಿಯಿಂದ ನೋಟಿಸ್ ಜಾರಿ

BIG NEWS: ಕನ್ನಡ ನಾಮಫಲಕ ಕಡ್ಡಾಯ: ಬಿಬಿಎಂಪಿಯಿಂದ ನೋಟಿಸ್ ಜಾರಿ

ಬೆಂಗಳೂರು: ಬೆಂಗಳೂರಿನ ಎಲ್ಲೆಡೆಗಳಲ್ಲಿ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಕಡ್ಡಾಯವಾಗಿ ಅಳವಡಿಸುವಂತೆ ಬಿಬಿಎಂಪಿ ಖಡಕ್ ನೋಟಿಸ್ ನೀಡಿದೆ.

ಅಂಗಡಿ ಮುಂಗಟ್ಟುಗಳು, ಹೋಟೆಲ್, ಮಾಲ್ ಸೇರಿದಂತೆ ಎಲ್ಲಾ ಮಾಲೀಕರಿಗೂ ನೋಟಿಸ್ ನೀಡಿದ್ದು, ಫೆಬ್ರವರಿ 28ರೊಳಗೆ ಕನ್ನಡ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಸೂಚಿಸಿದೆ.

ಪಾಲಿಕೆ ವ್ಯಾಪ್ತಿಯ 34,262 ಅಂಗಡಿಗಳಿಗೆ, ಬೊಮ್ಮನಹಳ್ಳಿ ವ್ಯಾಪ್ತಿಯ 6,762, ಯಲಹಂಕ 4838, ದಾಸರಹಳ್ಳಿ 1458, ಮಹದೇವಪುರ 4938, ಬೆಂಗಳೂರು ಪಶ್ಚಿಮ ವಲಯ 5,650, ರಾಜರಾಜೇಶ್ವರಿ ನಗರ 2010 ನೋಟಿಸ್ ನೀಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular