ದೇಶದೆಲ್ಲೆಡೆ ಅಯೋಧ್ಯೆಯ ಭವ್ಯ ರಾಮಮಂದಿರ ಉದ್ಘಾಟನೆಯ ಉತ್ಸಾಹ ಮನೆಮಾಡಿದೆ. ಎಲ್ಲರ ಚಿತ್ತ ಭಗವಾನ್ ರಾಮನ ಜನ್ಮಸ್ಥಳವಾದ ಅಯೋಧ್ಯೆಯತ್ತ ನೆಟ್ಟಿದೆ. ಭಾರತದ ವಿವಿಧ ಸ್ಥಳಗಳಲ್ಲಿ ಅನೇಕ ರಾಮಮಂದಿರಗಳಿವೆ. ಪ್ರತಿಯೊಂದೂ ತನ್ನದೇ ಆದ ವಿಶಿಷ್ಟ ಇತಿಹಾಸ ಮತ್ತು ಮಹತ್ವವನ್ನು ಹೊಂದಿದೆ. ಭಗವಾನ್ ರಾಮನ ಆಧ್ಯಾತ್ಮಿಕ ಸಾರವಿರುವ ಗುಪ್ತ ರತ್ನಗಳಿವು.
ರಾಮಪ್ಪ ದೇವಸ್ಥಾನ, ತೆಲಂಗಾಣ
ಪ್ರಾಥಮಿಕವಾಗಿ ಶಿವ ದೇವಾಲಯವಾಗಿದ್ದರೂ, ತೆಲಂಗಾಣದ ಪಾಲಂಪೇಟ್‌ನಲ್ಲಿರುವ ರಾಮಪ್ಪ ದೇವಾಲಯವು ದಶರಥ ಪುತ್ರನ ಆರಾಧನೆಗೂ ಸೀಮಿತವಾಗಿದೆ. ದೇವಾಲಯದ ವಾಸ್ತುಶಿಲ್ಪದ ವೈಭವ ಮತ್ತು ಕಾಕತೀಯ ರಾಜವಂಶದೊಂದಿಗಿನ ಅದರ ಸಂಬಂಧವು ಇತಿಹಾಸ ಪ್ರೇಮಿಗಳು, ಭಕ್ತರನ್ನು ಸೆಳೆಯುತ್ತದೆ.
ರಾಮನಗರ ಕೋಟೆ ದೇವಸ್ಥಾನ, ವಾರಣಾಸಿ
ವಾರಣಾಸಿ ಭಾರತದ ಆಧ್ಯಾತ್ಮಿಕತೆಯ ಹೃದಯಭಾಗವಿದ್ದಂತೆ. ಇಲ್ಲಿ 18ನೇ ಶತಮಾನದಲ್ಲಿ ಬನಾರಸ್ ಮಹಾರಾಜರಿಂದ ನಿರ್ಮಿಸಲ್ಪಟ್ಟ ಐತಿಹಾಸಿಕ ಕೋಟೆಯ ಸಂಕೀರ್ಣದಲ್ಲಿರುವ ಈ ದೇವಾಲಯವಿದೆ. ಗಂಗಾ ಘಾಟ್‌ಗಳ ಗದ್ದಲದಿಂದ ದೂರವಿರುವ ಯಾತ್ರಾರ್ಥಿಗಳನ್ನು ಇದು ಆಕರ್ಷಿಸುತ್ತದೆ.
ರಘುನಾಥ ದೇವಾಲಯ, ಜಮ್ಮು ಮತ್ತು ಕಾಶ್ಮೀರ
ಜಮ್ಮುವಿನ ಬೆಟ್ಟದ ಮೇಲಿರುವ ರಘುನಾಥ ದೇವಾಲಯವು ರಾಮನಿಗೆ ಅರ್ಪಿತವಾದ ಪುರಾತನ ದೇವಾಲಯವಾಗಿದೆ. ಪ್ರವಾಸಿಗರ ಸ್ವರ್ಗ ಎನಿಸಿಕೊಂಡಿರುವ ಜಮ್ಮು-ಕಾಶ್ಮೀರ ಆಧ್ಯಾತ್ಮಿಕ ಕಂಪನ್ನೂ ಪಸರಿಸುತ್ತಿದೆ. ಭಕ್ತರು ಪ್ರಶಾಂತ ವಾತಾವರಣದಲ್ಲಿ ದೈವಿಕ ಶಕ್ತಿಯೊಂದಿಗೆ ಸಂಪರ್ಕ ಸಾಧಿಸಲು ಅನುವು ಮಾಡಿಕೊಡುತ್ತದೆ.
ರಾಮಮಂದಿರ, ಓರ್ಚಾ, ಮಧ್ಯಪ್ರದೇಶ
ಐತಿಹಾಸಿಕ ನಗರವಾದ ಓರ್ಚಾದಲ್ಲಿರುವ ರಾಮ ದೇವಾಲಯವು ಭವ್ಯವಾದ ವಾಸ್ತುಶಿಲ್ಪ ಮತ್ತು ಸಂಕೀರ್ಣವಾದ ಕೆತ್ತನೆಗಳನ್ನು ಹೊಂದಿದೆ. ಬುಂದೇಲಾ ರಜಪೂತರ ಆಳ್ವಿಕೆಯಲ್ಲಿ 16ನೇ ಶತಮಾನದಲ್ಲಿ ನಿರ್ಮಿಸಲಾದ ಈ ದೇವಾಲಯವು ಅದ್ಭುತವಾಗಿದೆ. ಭಗವಾನ್ ರಾಮನ ಕಾಲಾತೀತ ಆಕರ್ಷಣೆಯನ್ನು ಪ್ರದರ್ಶಿಸುತ್ತದೆ.
ರಾಮತೀರ್ಥಂ, ಆಂಧ್ರಪ್ರದೇಶ
ವಿಜಯನಗರದ ಸಮೀಪದಲ್ಲಿರುವ ರಾಮತೀರ್ಥಂ, ಸುಂದರವಾದ ಬೆಟ್ಟಗಳ ನಡುವೆ ಇರುವ ಪುರಾತನವಾದ ಭಗವಾನ್ ರಾಮನ ದೇವಾಲಯಕ್ಕೆ ನೆಲೆಯಾಗಿದೆ. ಈ ದೇವಾಲಯವನ್ನು 17ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಇದು ದಕ್ಷಿಣ ಭಾರತದಲ್ಲಿ ಶ್ರೀರಾಮನ ನಿರಂತರ ಪರಂಪರೆಗೆ ಸಾಕ್ಷಿಯಾಗಿದೆ.
ರಾಮ್‌ಜೀ ಮಂದಿರ, ಕಾನ್ಪುರ
ಕಾನ್ಪುರದ ಹೃದಯಭಾಗದಲ್ಲಿರುವ ರಾಮ್‌ಜೀ ದೇವಾಲಯ ಅತ್ಯಂತ ಪುರಾತನವಾದದ್ದು. ಆಶೀರ್ವಾದ ಮತ್ತು ಆಧ್ಯಾತ್ಮಿಕ ಶಾಂತಿಗಾಗಿ ಭಕ್ತರು ಈ ದೇವಾಲಯಕ್ಕೆ ಬರುತ್ತಾರೆ. ನಗರದ ಗದ್ದಲದ ನಡುವೆ ಪವಿತ್ರವಾದ ಧಾಮವಾಗಿ ಇದು ಕಾರ್ಯನಿರ್ವಹಿಸುತ್ತದೆ.