ಮುಂಬೈ: ಜನವರಿ 22 ರಂದು 2000 ರೂಪಾಯಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವ ಮತ್ತು ಠೇವಣಿ ಮಾಡುವ ಸೌಲಭ್ಯ ಇರುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್(RBI) ತಿಳಿಸಿದೆ.
ಸೋಮವಾರ, ಜನವರಿ 22, 2024 ರಂದು ಸರ್ಕಾರಿ ಕಚೇರಿಗಳನ್ನು ಅರ್ಧ ದಿನ ಮುಚ್ಚುವ ಕಾರಣದಿಂದಾಗಿ ಲಭ್ಯವಿರುವುದಿಲ್ಲ ಎಂದು ಹೇಳಲಾಗಿದೆ.
ಭಾರತ ಸರ್ಕಾರವು ಅರ್ಧ ದಿನ ರಜೆ ಘೋಷಿಸಿದ ಹಿನ್ನಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನ ಯಾವುದೇ 19 ಕಚೇರಿಗಳಲ್ಲಿ ನೋಟು ವಿನಿಮಯ ಇರುವುದಿಲ್ಲ. ಈ ಸೌಲಭ್ಯವು ಮಂಗಳವಾರ, ಜನವರಿ 23, 2024 ರಂದು ಪುನರಾರಂಭವಾಗಲಿದೆ ಎಂದು ಆರ್.ಬಿ.ಐ. ತಿಳಿಸಿದೆ.