HomeEntertainment'ಒಂದು ಸರಳ ಪ್ರೇಮಕಥೆ' ಚಿತ್ರದ ಮತ್ತೊಂದು ಹಾಡು ರಿಲೀಸ್

‘ಒಂದು ಸರಳ ಪ್ರೇಮಕಥೆ’ ಚಿತ್ರದ ಮತ್ತೊಂದು ಹಾಡು ರಿಲೀಸ್

ವಿನಯ್ ರಾಜಕುಮಾರ್ ನಟನೆಯ ‘ಒಂದು ಸರಳ ಪ್ರೇಮಕಥೆ’ ಚಿತ್ರದ ಗುನುಗುನುಗು ಎಂಬ ವಿಡಿಯೋ ಹಾಡು ನಿನ್ನೆ ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಲಾಗಿದೆ.

ಕೇಶವ್ ಆನಂದ್ ಧ್ವನಿಯಾಗಿರುವ ಈ ಹಾಡಿಗೆ ವೀರ್ ಸಮರ್ಥ್ ಸಂಗೀತ ಸಂಯೋಜನೆ ನೀಡಿದ್ದು, ಸಚಿನ್ ಸಾಹಿತ್ಯವಿದೆ. ಗೋಲ್ಡನ್ ಸ್ಟಾರ್ ಗಣೇಶ್ ಈ ಹಾಡನ್ನು ಲಾಂಚ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಸಿಂಪಲ್ ಸುನಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ವಿನಯ್ ರಾಜಕುಮಾರ್ ಸೇರಿದಂತೆ ರಾಧಾಕೃಷ್ಣ ಧಾರಾವಾಹಿಯ ಮಲ್ಲಿಕಾ ಸಿಂಗ್ ಮತ್ತು ಸ್ವಾತಿಷ್ಟ ಮುಖ್ಯ ಭೂಮಿಕೆಯಲ್ಲಿದ್ದಾರೆ. ರಾಮ್ ಮೂವೀಸ್ ಬ್ಯಾನರ್ ನಡಿ ಮೈಸೂರು ರಮೇಶ್ ನಿರ್ಮಾಣ ಮಾಡಿದ್ದು, ಆದಿ ಸಂಕಲನ, ಕಾರ್ತಿಕ್ ಶರ್ಮಾ ಮತ್ತು ಸಭಾ ಕುಮಾರ್ ಛಾಯಾಗ್ರಾಣವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular