ಬೆಂಗಳೂರು : ಪುರುಷರೇ ಎಚ್ಚರ…ನೀವು ಸಾರಿಗೆ ಬಸ್ ಗಳಲ್ಲಿ ಪ್ರಯಾಣಿಸುವಾಗ ಅಪ್ಪಿ ತಪ್ಪಿ ಕೂಡ ಮಹಿಳೆಯರ ಸೀಟಿನಲ್ಲಿ ಕೂರಬೇಡಿ..ಕುಳಿತರೆ ಬೀಳುತ್ತೆ ಭಾರಿ ದಂಡ.
ಹೌದು, ಮಹಿಳೆಯರ ಸೀಟಿನಲ್ಲಿ ಕುಳಿತ ಪುರುಷರಿಗೆ ಬಿಎಂಟಿಸಿ ಭಾರಿ ದಂಡ ವಿಧಿಸಿದೆ. ಬಿಎಂಟಿಸಿ ಬಸ್ನಲ್ಲಿ ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಸೀಟಿನಲ್ಲಿ ಕುಳಿತು ಪ್ರಯಾಣಿಸಿದ ಪುರುಷ ಪ್ರಯಾಣಿಕರಿಗೆ ಭಾರಿ ದಂಡ ವಿಧಿಸಲಾಗಿದೆ. ಮಹಿಳಾ ಪ್ರಯಾಣಿಕರ ಆಸನದಲ್ಲಿ ಕುಳಿತ 347 ಪುರುಷ ಪ್ರಯಾಣಿಕರಿಂದ 34,700 ರೂಪಾಯಿ ದಂಡ ಸಂಗ್ರಹಿಸಲಾಗಿದೆ . ಮೋಟಾರು ವಾಹನ ಕಾಯ್ದೆ 1988ರ ಕಾಲಂ 177 ಮತ್ತು 94ರ ಪ್ರಕಾರ ದಂಡ ವಸೂಲಿ ಮಾಡಲಾಗಿದೆ ಎಂದು ಹೇಳಲಾಗಿದೆ.
ಅದೇ ರೀತಿ ಬಿಎಂಟಿಸಿ ಬಸ್ ನಲ್ಲಿ ಟಿಕೆಟ್ ಪಡೆಯದೇ ಪ್ರಯಾಣಿಸಿದ ಪ್ರಯಾಣಿಕರಿಗೆ ದಂಡ ವಿಧಿಸಲಾಗಿದೆ. ಡಿಸೆಂಬರ್ 2023ರಲ್ಲಿ 3,502 ಪ್ರಯಾಣಿಕರಿಗೆ ದಂಡ ವಿಧಿಸಿದ್ದು , ಅವರಿಂದ ಒಟ್ಟು 7,02,340 ರೂ. ದಂಡ ವಸೂಲಿ ಮಾಡಿದ್ದಾರೆ.