ಕೊಚ್ಚಿಯಲ್ಲಿ 4,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಮೂರು ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಪ್ರಧಾನಿ ಮೋದಿ ಇಂದು ಚಾಲನೆ ನೀಡಿದರು.
ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ (ಸಿಎಸ್ ಎಲ್) ನಲ್ಲಿ ನ್ಯೂ ಡ್ರೈ ಡಾಕ್ (ಎನ್ ಡಿಡಿ), ಸಿಎಸ್ ಎಲ್ ನ ಅಂತರರಾಷ್ಟ್ರೀಯ ಹಡಗು ದುರಸ್ತಿ ಸೌಲಭ್ಯ (ಐಎಸ್ ಆರ್ ಎಫ್) ಮತ್ತು ಕೊಚ್ಚಿಯ ಪುದುವೈಪೀನ್ ನಲ್ಲಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನ ಎಲ್ ಪಿಜಿ ಆಮದು ಟರ್ಮಿನಲ್ ಅನ್ನು ಇಂದು ಉದ್ಘಾಟಿಸಿದರು. ಈ ಪ್ರಮುಖ ಮೂಲಸೌಕರ್ಯ ಯೋಜನೆಗಳು ಭಾರತದ ಬಂದರುಗಳು, ಹಡಗು ಮತ್ತು ಜಲಮಾರ್ಗ ವಲಯವನ್ನು ಪರಿವರ್ತಿಸುವ ಮತ್ತು ಅದರಲ್ಲಿ ಸಾಮರ್ಥ್ಯ ಮತ್ತು ಸ್ವಾವಲಂಬನೆಯನ್ನು ನಿರ್ಮಿಸುವ ಪ್ರಧಾನ ಮಂತ್ರಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿವೆ.
ಕಳೆದ 10 ವರ್ಷಗಳಲ್ಲಿ, ಹಡಗು ವಲಯದಲ್ಲಿ ಭಾರಿ ಅಭಿವೃದ್ಧಿ ಕಂಡುಬಂದಿದೆ. ಕೇಂದ್ರ ಸುಧಾರಣಾ ಕ್ರಮಗಳಿಂದ ಬಂದರು ವಲಯದಲ್ಲಿ ಹೂಡಿಕೆ ಹೆಚ್ಚಿದೆ.. ಉದ್ಯೋಗಾವಕಾಶಗಳು ಹೆಚ್ಚಿದೆ ಎಂದು ಪ್ರಧಾನಿ ಮೋದಿ ಹೇಳಿದರು.