ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಆಂಧ್ರಪ್ರದೇಶದ ಲೇಪಾಕ್ಷಿಯ ವೀರಭದ್ರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಪ್ರಧಾನಿ ಮೋದಿ ದೇವಾಲಯದಲ್ಲಿ ರಾಮಭಜನೆ ಮಾಡಿ ಪ್ರಾರ್ಥನೆ ಸಲ್ಲಿಸುತ್ತಿರುವ ವೀಡಿಯೋ ವೈರಲ್ ಆಗಿದೆ. ವೀಡಿಯೊದಲ್ಲಿ, ಸಾಂಪ್ರದಾಯಿಕ ಉಡುಪನ್ನು ಧರಿಸಿದ ಪ್ರಧಾನಿ ಮೋದಿ ಅವರು “ಆರತಿ” ಮಾಡುವ ದೃಶ್ಯವಿದೆ.
ಈ ದೇವಾಲಯವು ಶಿವನ ಅಗ್ನಿ ರೂಪವಾದ ದೇತಿ ವೀರಭದ್ರನಿಗೆ ಸಮರ್ಪಿತವಾಗಿದೆ. ಈ ದೇವಾಲಯವು ರಾಮಾಯಣದೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ. ದೇವಾಲಯದ ಸಂಕೀರ್ಣದಲ್ಲಿ, ಹಿಂದೂ ದೇವರುಗಳು ಮತ್ತು ದೇವತೆಗಳ ವಿಗ್ರಹಗಳು – ವಿಷ್ಣು, ಪಾಪನೇಶ್ವರ, ಲಕ್ಷ್ಮಿ, ಗಣೇಶ ಮತ್ತು ದುರ್ಗಾ ಮತ್ತು ಇತರರು ಇದ್ದಾರೆ.