HomeKarnatakaಬೆಂಗಳೂರಿನಲ್ಲಿ ಘೋರ ದುರಂತ : ನೀರಿನ ಸಂಪ್ ಗೆ ಬಿದ್ದು 7 ವರ್ಷದ ಬಾಲಕ ಸಾವು

ಬೆಂಗಳೂರಿನಲ್ಲಿ ಘೋರ ದುರಂತ : ನೀರಿನ ಸಂಪ್ ಗೆ ಬಿದ್ದು 7 ವರ್ಷದ ಬಾಲಕ ಸಾವು

ಬೆಂಗಳೂರು :  ರಾಜಧಾನಿ ಬೆಂಗಳೂರಿನಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ನಿರ್ಮಾಣ ಹಂತದ ಮನೆಯಲ್ಲಿನ ನೀರಿನ ಸಂಪ್‌ ಗೆ ಬಿದ್ದು ಏಳು ವರ್ಷದ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ.

ಬೆಂಗಳೂರಿನ ಗಂಗಮ್ಮನಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಯಾದಿಗಿರಿ ಮೂಲದ ಶಂಶುದ್ದೀನ್‌ ದಂಪತಿ ಕಟ್ಟಡ ಕಾರ್ಮಿಕರಾಗಿದ್ದು, ಅಬ್ಬಿಗೆರೆ ಶಿವಣ್ಣ ತೋಟದ ವ್ಯಾಪ್ತಿಯಲ್ಲಿ ಶೆಡ್‌ ನಿರ್ಮಿಸಿಕೊಂಡು ವಾಸಿಸುತ್ತಿದ್ದರು. ಶೆಡ್‌ ಮುಂಭಾಗ ಆಟವಾಡುತ್ತಿದ್ದ ಮಗು ನೀರಿನ ಸಂಪ್‌ ಗೆ ಬಿದ್ದು ಮೃತಪಟ್ಟಿದೆ.

ಶಬ್ಬೀರ್‌ (7) ಮೃತ ದುರ್ದೈವಿ. ಶಂಶುದೀನ್‌ ನೀಡಿದ ದೂರು ಆಧರಿಸಿ ಅಸಹಜ ಸಾವು ಪ್ರಕರಣ  ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular