![](https://kannadadunia.com/wp-content/uploads/2023/10/r.b.timmapura-.jpg)
ಹುಬ್ಬಳ್ಳಿ : ಹಿಂದೂಗಳಿಗೆ ರಾಮ ಒಬ್ಬನೇ ದೇವರಾ? ಕಾಳವ್ವ, ಹನುಮಂತ, ದುರ್ಗವ್ವ ದೇವರಲ್ವಾ? ಎಂದು ಸಚಿವ ಆರ್.ಬಿ. ತಿಮ್ಮಾಪುರ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಗಳಿಗೆ ರಾಮ ಒಬ್ಬನೇ ದೇವರಾ? ರಾಮಮಂದಿರಕ್ಕೆ ಹೋದರಷ್ಟೇ ಹಿಂದೂಗಳಾ? ಕಾಳವ್ವ, ಹನುಮಂತ, ದುರ್ಗವ್ವ ದೇವರಲ್ವಾ? ಹಳ್ಳಿಯಲ್ಲಿರುವ ದೇವರು ಬಿಜೆಪಿಯವರಿಗೆ ಕಾಣಿಸುವುದಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಮನ ಹೆಸರಿನಲ್ಲಿ ಬಿಜೆಪಿಯವರು ಚುನಾವಣೆಗೆ ಹೊರಟಿದ್ದಾರೆ. ರಾಮನ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ನರೇಂದ್ರ ಮೋದಿಯೇ ದೇವರು. ಅವರಿಗೆ ಹಳ್ಳಿಯಲ್ಲಿರುವ ದೇವರು ಕಾಣಿಸುವುದಿಲ್ಲ ಎಂದು ಹೇಳಿದ್ದಾರೆ.