ಪ್ರಭಾಸ್ ಅಭಿನಯದ ಸಲಾರ್ ಸಿನಿಮಾ ಬಾಕ್ಸ್ ಆಫೀಸ್ ಧೂಳೆಬ್ಬಿಸುವ ಮೂಲಕ ವಿಶ್ವದಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಾಲು ಸಾಲು ಸೋಲಿನ ಬಳಿಕ ಪ್ರಭಾಸ್ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಇದೀಗ ಪ್ರಭಾಸ್ ನಟನೆಯ ಬಹುನಿರೀಕ್ಷಿತ ‘ಕಲ್ಕಿ 2898 AD’ ಚಿತ್ರ ಮೇ ಒಂಬತ್ತರಂದು ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಇಂದು ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದೆ.
ಈ ಸಿನಿಮಾದಲ್ಲಿ ಪ್ರಭಾಸ್ ಸೇರಿದಂತೆ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ದಿಶಾ ಪಟಾನಿ, ಕಮಲ್ ಹಾಸನ್ ಹಾಗೂ ಶ್ವೇತಾ ಚಟರ್ಜಿ ತೆರೆ ಹಂಚಿಕೊಂಡಿದ್ದಾರೆ. ವೈ ಜಯಂತಿ ಮೂವೀಸ್ ಬ್ಯಾನರ್ ನಡಿ ಅಶ್ವಿನಿ ದತ್ ನಿರ್ಮಾಣ ಮಾಡಿದ್ದು, ನಾಗ್ ಅಶ್ವಿನ್ ನಿರ್ದೇಶಿಸಿದ್ದಾರೆ. ಸಂತೋಷ್ ನಾರಾಯಣನ್ ಸಂಗೀತ ಸಂಯೋಜನೆ ನೀಡಿದ್ದಾರೆ.
https://twitter.com/SrBachchan/status/1745694602957627895?ref_src=twsrc%5Etfw%7Ctwcamp%5Etweetembed%7Ctwterm%5E1745694602957627895%7Ctwgr%5E0bc8a826bbd2376ed70b5c63538f1e84432cbd58%7Ctwcon%5Es1_&ref_url=https%3A%2F%2Fwww.indiatoday.in%2Fmovies%2Fregional-cinema%2Fstory%2Fkalki-2898-ad-amitabh-bachchan-unveils-release-date-of-prabhas-deepika-padukones-film-2487762-2024-01-12