ಬೆಂಗಳೂರು : ಜೈಲಿಂದ ಬಿಡುಗಡೆಯಾದರೂ ಕರ್ನಾಟಕ ರಕ್ಷಣ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡರಿಗೆ ಸಂಕಷ್ಟ ತಪ್ಪಿಲ್ಲ, 8 ಪ್ರಕರಣದಲ್ಲಿ ನೋಟಿಸ್ ನೀಡಲು ಪೊಲೀಸರು ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ.
ಹೌದು, ಅವರು ಬಂಧನಕ್ಕೊಳಗಾಗಿದ್ದು ಒಂದು ಕೇಸ್ ನಲ್ಲಿ ಆದರೂ ಅವರ ಮೇಲೆ 8 ಕೇಸ್ ಗಳು ಬಾಕಿಯಿದೆ. ವಿವಿಧ ಕಡೆ ಹೆದ್ದಾರಿ ತಡೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಪ್ರಕರಣ ಸೇರಿ ಚಿಕ್ಕಜಾಲದಲ್ಲಿ ಒಟ್ಟು 6 ಪ್ರಕರಣಗಳಿದೆ. ಯಲಹಂಕದಲ್ಲಿ ಬಿಎಂಟಿಸಿ ಬಸ್ಗೆ ಹಾನಿ ಮಾಡಿದ, ಇಕೋ ಪೊಲೀಸ್ ಬೋರ್ಡ್ ಡ್ಯಾಮೇಜ್ ಪ್ರಕರಣಗಳಿದ್ದು, , 8 ಪ್ರಕರಣದಲ್ಲಿ ನೋಟಿಸ್ ನೀಡಲು ಪೊಲೀಸರು ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ.
2017 ರ ಪ್ರಕರಣದಲ್ಲಿ ಜಾಮೀನು ಸಿಗುತ್ತಿದ್ದಂತೆ ಹಲಸೂರು ಗೇಟ್ ಠಾಣೆ ಪ್ರಕರಣದಲ್ಲಿ ಮತ್ತೆ ನಾರಾಯಣ ಗೌಡರನ್ನು ವಶಕ್ಕೆ ಪಡೆದಿದ್ದರು. ನಂತರ ಈ ಪ್ರಕರಣದಲ್ಲೂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದಂತ ಎನ್ ಡಿ ಎಂ ಎ ಕಾಯ್ದೆಯಡಿಯ ಪ್ರಕರಣದಲ್ಲಿ ಮತ್ತೆ ಕರವೇ ಅಧ್ಯಕ್ಷ ನಾರಾಯಣಗೌಡ ಅವರನ್ನು ಬಂಧಿಸಲಾಗಿತ್ತು. ನಂತರ ಪೊಲೀಸರು ಬೆಂಗಳೂರಿನ 30ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನಂತರ ಅವರಿಗೆ ಹಲಸೂರು ಗೇಟ್ ಠಾಣೆಯಲ್ಲಿ ದಾಖಲಾಗಿದ್ದಂತ ಎನ್ ಡಿಎಂಎ ಕಾಯ್ದೆಯಡಿ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡಲಾಗಿತ್ತು.