ಅಫ್ಘಾನಿಸ್ತಾನದ ಹಿಂದೂಕುಶ್ ಪ್ರದೇಶದಲ್ಲಿ ಶುಕ್ರವಾರ ಮುಂಜಾನೆ ರಿಕ್ಟರ್ ಮಾಪಕದಲ್ಲಿ 4.4 ತೀವ್ರತೆಯ ಭೂಕಂಪನ ಸಂಭವಿಸಿದ ಕೆಲವೇ ಗಂಟೆಗಳ ನಂತರ ಅಫ್ಘಾನಿಸ್ತಾನದಲ್ಲಿ ಮತ್ತೊಂದು ಭೂಕಂಪ ಸಂಭವಿಸಿದೆ.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಇತ್ತೀಚಿನ ಭೂಕಂಪವು ಬೆಳಿಗ್ಗೆ 9.40 ಕ್ಕೆ ಸಂಭವಿಸಿದೆ ಮತ್ತು 180 ಕಿಲೋಮೀಟರ್ ಆಳದಲ್ಲಿತ್ತು. ಇದಕ್ಕೂ ಮೊದಲು ಮುಂಜಾನೆ 4.51 ಕ್ಕೆ ಭೂಕಂಪ ಸಂಭವಿಸಿದ್ದು, 17 ಕಿಲೋಮೀಟರ್ ಆಳದಲ್ಲಿತ್ತು. ಕಳೆದ 24 ಗಂಟೆಗಳಲ್ಲಿ ಅಫ್ಘಾನಿಸ್ತಾನದಲ್ಲಿ 24 ಗಂಟೆಗಳಲ್ಲಿ 3 ಭೂಕಂಪ ಸಂಭವಿಸಿದೆ ಎಂದು ತಿಳಿದು ಬಂದಿದೆ.