ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೈಗೊಂಡಿರುವ ಭಾರತ್ ಜೋಡೋ ನ್ಯಾಯ ಯಾತ್ರೆ ಅಂಗವಾಗಿ ದೇಶಕ್ಕಾಗಿ ದೇಣಿಗೆ ಅಭಿಯಾನ ಮೂಲಕ ಹಣ ಸಂಗ್ರಹಿಸಲಾಗಿದೆ.
ಅಭಿಯಾನದ ವೆಬ್ ಸೈಟ್ ಕ್ಯೂಆರ್ ಕೋಡ್ ತಪ್ಪಾಗಿದ್ದ ಕಾರಣ ಲಕ್ಷಾಂತರ ರೂಪಾಯಿ ನಷ್ಟವಾಗಿರುವುದು ಬೆಳಕಿಗೆ ಬಂದಿದೆ. ಕಾಂಗ್ರೆಸ್ ಪಕ್ಷ ಮುದ್ರಿಸಿದ್ದ ಕರಪತ್ರದಲ್ಲಿ ವೆಬ್ಸೈಟ್ ವಿಳಾಸ ಮತ್ತು ಕ್ಯೂಆರ್ ಕೋಡ್ ನ ನಕಲಿಯಾಗಿದ್ದರಿಂದ ಜನರ ತೆರಿಗೆ ಹಣ ಯಾವುದೋ ನಕಲಿ ಖಾತೆಗೆ ಜಮೆಯಾಗಿದೆ ಎಂದು ಕಾಂಗ್ರೆಸ್ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಬಹಿರಂಗಪಡಿಸಿದ್ದಾರೆ.
ಕರಪತ್ರದಲ್ಲಿ ತಪ್ಪು ವೆಬ್ಸೈಟ್ ಅನ್ನು ಲಿಂಕ್ ಮಾಡಲಾಗಿತ್ತು. ಇದರಿಂದ ದೇಣಿಗೆ ಹಣ ನಕಲಿ ಖಾತೆಗೆ ಜಮೆಯಾಗಿದೆ ಎಂದು ಹೇಳಲಾಗಿದೆ.
ಕರಪತ್ರದಲ್ಲಿ, ಕ್ಯೂಆರ್ ಕೋಡ್ ಮತ್ತು ‘ಡೊನೇಟ್ ಫಾರ್ ದೇಶ್’ ವೆಬ್ಸೈಟ್ನ ಯುಆರ್ಎಲ್ ಅನ್ನು ಸಹ ಉಲ್ಲೇಖಿಸಲಾಗಿದೆ, ಎರಡೂ ತಪ್ಪಾಗಿದೆ. ಅಧಿಕೃತ ‘ಡೊನೇಟ್ ಫಾರ್ ದೇಶ್’ ಅಭಿಯಾನದ URL donateinc.in ಆಗಿದೆ, ಆದರೆ ಕರಪತ್ರದಲ್ಲಿ donateinc.co.in ಅನ್ನು ಮುದ್ರಿಸಲಾಗಿದೆ.