ಲಕ್ನೋ: ಉತ್ತರಪ್ರದೇಶದ ಮಣಿಕರ್ಣಿಕಾ ಘಾಟ್ನಲ್ಲಿ ವ್ಯಕ್ತಿಯೊಬ್ಬ ತನ್ನ ತಂದೆಯ ಅಂತ್ಯಸಂಸ್ಕಾರವನ್ನು ಮದ್ಯ, ಬೀಡಿ ಹಾಗೂ ಬನಾರಸಿ ಪಾನ್ ನಿಂದ ದಹನ ಮಾಡಿದ ಘಟನೆ ನಡೆದಿದೆ.
ಉತ್ತರ ಪ್ರದೇಶದ ವಾರಣಾಸಿಯಲ್ಲಿ ವ್ಯಕ್ತಿಯೊಬ್ಬ ತನ್ನ ಮೃತ ತಂದೆಯನ್ನು ಮದ್ಯ, ಬೀಡಿ ಮತ್ತು ಬನಾರಸಿ ಪಾನ್ ನಿಂದ ದಹನ ಮಾಡಿದ ವಿಚಿತ್ರ ಘಟನೆ ನಡೆದಿದೆ. ಮಣಿಕರ್ಣಿಕಾ ಘಾಟ್ನಲ್ಲಿ ಮೃತ ತಂದೆಯ ಚಿತೆಯ ಮೇಲೆ ವ್ಯಕ್ತಿಯೊಬ್ಬ ಪದಾರ್ಥಗಳನ್ನು ಸುರಿಯುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಆ ವ್ಯಕ್ತಿಯು ಶ್ರದ್ಧೆಯಿಂದ ಮದ್ಯವನ್ನು ಸುರಿದು, ಬೀಡಿ ಮತ್ತು ಪಾನ್ ಅನ್ನು ಚಿತೆಯ ಮೇಲೆ ಇರಿಸುತ್ತಿದ್ದಂತೆ ಸ್ಥಳೀಯರು ‘ಹರ ಹರ ಮಹಾದೇವ್’ ಎಂದು ಘೋಷಣೆ ಕೂಗಿದರು. ಅಸಾಂಪ್ರದಾಯಿಕ ಅರ್ಪಣೆಗಳು ಮೃತ ತಂದೆಯ ಇಚ್ಛೆಯನ್ನು ಗೌರವಿಸುವ ಉದ್ದೇಶವನ್ನು ಹೊಂದಿವೆ ಎಂದು ಅವರು ವಿವರಿಸಿದರು. “ಅವರ ಯಾವುದೇ ಆಸೆಗಳು ಈಡೇರದೆ ಉಳಿಯಬಾರದು” ಎಂದು ಅವರು ಅಂತಿಮ ವಿಧಿಗಳನ್ನು ನೆರವೇರಿಸುವಾಗ ಹೇಳಿದರು.