ಎಥರ್ 450S ಎಲೆಕ್ಟ್ರಿಕ್ ಸ್ಕೂಟರ್ ಮೇಲೆ 20,000 ರೂ. ಕಡಿತ; ಹೊಸ ಬೆಲೆ ಎಷ್ಟು ಗೊತ್ತಾ ?

ಬೆಂಗಳೂರು ಮೂಲದ ಎಲೆಕ್ಟ್ರಿಕ್ ವಾಹನ ತಯಾರಕ ಎಥರ್ ಎನರ್ಜಿ ತನ್ನ ಎಥರ್ 450 ಎಸ್ ಬೆಲೆ ಮೇಲೇ ಭಾರೀ ಕಡಿತವನ್ನು ಘೋಷಿಸಿದೆ. ತನ್ನ ಗ್ರಾಹಕರ ನೆಲೆಯನ್ನು ವಿಸ್ತರಿಸಲು ಮತ್ತು ಮಾರುಕಟ್ಟೆಯಲ್ಲಿ ಎಥರ್ 450 ಎಸ್ ಮಾದರಿಯನ್ನು ಹೆಚ್ಚು ಸ್ಪರ್ಧಾತ್ಮಕ ಉತ್ಪನ್ನವನ್ನಾಗಿ ಮಾಡುವ ಪ್ರಯತ್ನದಲ್ಲಿ 20,000 ರೂಪಾಯಿ ಬೆಲೆ ಕಡಿತವನ್ನು ಘೋಷಿಸಿದ್ದಾರೆ.

ಇದರಿಂದ ಈಗ ಬೆಂಗಳೂರಿನಲ್ಲಿ 1.09 ಲಕ್ಷ ರೂಪಾಯಿಗಳ ( ಎಕ್ಸ್ ಶೋ ರೂಂ) ಆರಂಭಿಕ ಬೆಲೆಯಲ್ಲಿ ಎಥರ್ 450 ಎಸ್ ಲಭ್ಯವಿರುತ್ತದೆ . ಹೊಸ ಕಡಿತದೊಂದಿಗೆ ದೆಹಲಿಯಲ್ಲಿ 97,500 ರೂ. ( ಎಕ್ಸ್ ಶೋ ರೂಂ) ಗಳಿಗೆ ಸಿಗಲಿದೆ. ಮತ್ತೊಂದೆಡೆ ‘ಪ್ರೊ ಪ್ಯಾಕ್’ ಹೊಂದಿರುವ 450S ಬೆಲೆ 25,000 ರೂ. ಗಳಷ್ಟು ಕಡಿಮೆಯಾಗಿದೆ.

ಎಥರ್ 450S 2.9 kWh ಬ್ಯಾಟರಿಯನ್ನು ಬಳಸುತ್ತದೆ, ಇದು 115 ಕಿಮೀಗಳ IDC ವ್ಯಾಪ್ತಿಯನ್ನು ಒದಗಿಸುತ್ತದೆ. 5.4 kW ಮೋಟಾರ್‌ನಿಂದ ಚಲಿಸುವ ಈ ಎಲೆಕ್ಟ್ರಿಕ್ ಸ್ಕೂಟರ್ 3.9 ಸೆಕೆಂಡುಗಳಲ್ಲಿ 0-40 kmph ಅನ್ನು ಸಾಧಿಸುತ್ತದೆ ಮತ್ತು 90 kmph ಗರಿಷ್ಠ ವೇಗವನ್ನು ಪಡೆಯುತ್ತದೆ. ಮನೆಯಲ್ಲಿ ಬ್ಯಾಟರಿಯನ್ನು 0-80 ಪ್ರತಿಶತಕ್ಕೆ ಚಾರ್ಜ್ ಮಾಡಲು ಸರಿಸುಮಾರು 6 ಗಂಟೆ 36 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ಎಥರ್ ಎನರ್ಜಿ ದೇಶದ ಮೂರು ಅಗ್ರ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರಲ್ಲಿ ಒಂದಾಗಿದೆ. ಓಲಾ ಎಲೆಕ್ಟ್ರಿಕ್, ಟಿವಿಎಸ್ ಮತ್ತು ಬಜಾಜ್ ಚೇತಕ್‌ನೊಂದಿಗೆ ನಿಕಟವಾಗಿ ಇದು ಸ್ಪರ್ಧಿಸುತ್ತಿದೆ.

ಇದೀಗ ನವೀಕರಿಸಿದ ಬೆಲೆಯೊಂದಿಗೆ ಎಥರ್ ತನ್ನ ಪ್ರತಿಸ್ಪರ್ಧಿಗಳನ್ನು ಬೆಲೆಯಲ್ಲಿ ಹಿಂದಕ್ಕೆ ತಳ್ಳಿದೆ. ಇದರಲ್ಲಿ ಬಜಾಜ್ ಚೇತಕ್ ಅರ್ಬೇನ್ ಬೆಲೆ 1.15 ಲಕ್ಷ, ಮೂಲ ಟಿವಿಎಸ್ iQube ಬೆಲೆ 1.23 ಲಕ್ಷ, ಮತ್ತು ಓಲಾ ಎಸ್1 ಏರ್ 1.20 ಲಕ್ಷ ರೂ. ಬೆಲೆಯನ್ನು ಹೊಂದಿದೆ. ಕಳೆದ ಡಿಸೆಂಬರ್ ನಲ್ಲಿ ಎಥರ್ ಎನರ್ಜಿ, “ಎಥರ್ ಎಲೆಕ್ಟ್ರಿಕ್ ಡಿಸೆಂಬರ್” ಉಪಕ್ರಮ ನಡೆಸಿತ್ತು. ಇದರಲ್ಲಿ ಗ್ರಾಹಕರಿಗೆ ಗರಿಷ್ಟ 24,000 ರೂ.ವರೆಗೆ ಬಂಪರ್ ಆಫರ್ ನೀಡಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read