![](https://kannadadunia.com/wp-content/uploads/2022/06/Dinesh-Gundu-Rao.jpg)
ಬೆಂಗಳೂರು : ಈ ಬಾರಿಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ರಾಜ್ಯದ ಸ್ಥಬ್ಧ ಚಿತ್ರಕ್ಕೆ ಅವಕಾಶ ನಿರಾಕರಿಸಿರುವ ಕೇಂದ್ರ ಸರ್ಕಾರದ ಭಂಡತನದ ನಿರ್ಧಾರವು ಕನ್ನಡಿಗರಿಗೆ ಮಾಡಿದ ಮತ್ತೊಂದು ಅನ್ಯಾಯ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮೈಸೂರು ರಾಜ್ಯವನ್ನು ವಿಶ್ವವೇ ತಿರುಗಿ ನೋಡುವ ರೀತಿಯಲ್ಲಿ ಅಭಿವೃದ್ಧಿ ಪಡಿಸಿದ್ದ ಸಾಮಾಜಿಕ ನ್ಯಾಯದ ಹರಿಕಾರ ನಾಲ್ವಡಿ ಕೃಷ್ಣರಾಜ ಒಡೆಯರ್, ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ್ದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ, ವಿಶ್ವವೇ ದೃಷ್ಟಿ ನೆಟ್ಟಿರುವ ನಮ್ಮ ಹೆಮ್ಮೆಯ ʻಬ್ರ್ಯಾಂಡ್ ಬೆಂಗಳೂರುʼ ಹಾಗೂ ಕರ್ನಾಟಕದ ಪ್ರಕೃತಿಯ ಸೊಬಗನ್ನು ಬಣ್ಣಿಸುವ ಸ್ತಬ್ಧಚಿತ್ರ ಒಳಗೊಂಡಂತೆ 4 ಮಾದರಿಗಳಿಗೆ ಅವಕಾಶ ಕೋರಿ ಕೇಂದ್ರಕ್ಕೆ ಮನವಿ ಮಾಡಲಾಗಿತ್ತು. ಆದರೆ ಇದಕ್ಕೆ ಅವಕಾಶ ನಿರಾಕರಿಸುವ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಅನ್ಯಾಯ ಮಾಡಿದೆ ಎಂದು ಕಿಡಿಕಾರಿದ್ದಾರೆ.
ಪ್ರಧಾನ ಮಂತ್ರಿ ಮೋದಿ ಅವರಿಗೆ ಖುಷಿ ಆಗುವ ರೀತಿಯಲ್ಲಿ ಸ್ತಬ್ಧಚಿತ್ರದ ಪ್ರಸ್ತಾವನೆ ಕಳುಹಿಸಿದ್ದರೆ ಅದಕ್ಕೆ ಒಪ್ಪಿಗೆ ದೊರೆಯುತ್ತಿತ್ತು. ಆದರೆ ನಾವು ಯಾರನ್ನೂ ಮೆಚ್ಚಿಸುವ ಕಾರ್ಯಕ್ಕೆ ಮುಂದಾಗಿಲ್ಲ. ಬದಲಾಗಿ, ನಮ್ಮ ರಾಜ್ಯದ ಪರಂಪರೆಗೆ ಒತ್ತುಕೊಟ್ಟಿದ್ದೆವು ಎಂದು ಹೇಳಿದ್ದಾರೆ.