ಬಳ್ಳಾರಿ : ಜಿಲ್ಲೆಯ ಗೃಹ ರಕ್ಷಕದಳದ “ಗೌರವ ಸಮಾದೇಷ್ಟರ” ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಆರಕ್ಷಕ ಮಹಾ ನಿರ್ದೇಶಕರು, ಗೃಹರಕ್ಷಕದಳದ ಮಹಾ ಸಮಾದೇಷ್ಟರು ಮತ್ತು ಪೌರರಕ್ಷಣೆಯ ನಿರ್ದೇಶಕರಾದ ಅಕ್ಷಯ್ ಎಂ.ಹಾಕೆ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಗೃಹರಕ್ಷಕದಳದ “ಗೌರವ ಸಮಾದೇಷ್ಟರ” ಖಾಲಿ ಇದ್ದು, ಅಭ್ಯರ್ಥಿಯನ್ನು ಅರ್ಹತೆ ಆಧಾರದ ಮೇಲೆ ಹಾಗೂ ಸರ್ಕಾರದ ನಿಯಮನುಸಾರವಾಗಿ ಆಯ್ಕೆ ಮಾಡಲಾಗುತ್ತದೆ.
ಅರ್ಹತೆಗಳು
ವಯೋಮಿತಿ 50 ವರ್ಷ ಒಳಗಿರಬೇಕು, ಪದವಿ ಪೂರ್ಣಗೊಳಿಸಿರಬೇಕು, ಯಾವುದೇ ರಾಜಕೀಯ ಪಕ್ಷಗಳ ಚಟುವಟಿಕೆಗಳಲ್ಲಿ ಪಾಲ್ಗೊಂಡಿರಬಾರದು, ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ಪ್ರಕರಣಗಳಲ್ಲಿ ಭಾಗಿಯಾಗಿರಬಾರದು, ಜಿಲ್ಲಾ ಮುಖ್ಯ ಕಚೇರಿಯ 20 ಕಿ.ಮೀ. ವ್ಯಾಪ್ತಿಯೊಳಗೆ ವಾಸವಿರಬೇಕು.
ಜಿಲ್ಲಾ ಆರೋಗ್ಯಾಧಿಕಾರಿಗಳಿಂದ ದೈಹಿಕ ಮತ್ತು ಮಾನಸಿಕ ಸಧೃಡತೆ ಪ್ರಮಾಣ ಪತ್ರ ಪಡೆದಿರಬೇಕು. ಮತ್ತು ರೆಸಿಪಿಯೆಂಟ್ ಆಫ್ ಗ್ಯಾಲಂಟ್ರಿ ಪ್ರಶಸ್ತಿ, ಎನ್.ಸಿ.ಸಿ “ಸಿ” ಪ್ರಮಾಣ ಪತ್ರ, ಭಾರತೀಯ ಸೇನೆ, ಪ್ಯಾರ ಮಿಲ್ಟ್ರಿ ಸೇನೆ ಅಥವಾ ಪೋಲಿಸ್ ಇಲಾಖೆಗಳಲ್ಲಿ ಐದು ವóರ್ಷ ಸೇವೆ ಸಲ್ಲಿಸಿದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಸ್ವವಿವರದೊಂದಿಗೆ ಜ.30 ರ ಒಳಗಾಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.