ನವದೆಹಲಿ: ಮುಂಬೈನ ಆದಾಯ ತೆರಿಗೆ ಇಲಾಖೆ ಕ್ರೀಡಾ ಕೋಟಾದಡಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಜನವರಿ 19 ಕೊನೆಯ ದಿನಾಂಕವಾಗಿದೆ.
ಆದಾಯ ತೆರಿಗೆ ಇನ್ಸ್ಪೆಕ್ಟರ್, ಸ್ಟೆನೋಗ್ರಾಫರ್, ಟ್ಯಾಕ್ಸ್ ಅಸಿಸ್ಟೆಂಟ್, ಮಲ್ಟಿ ಟಾಸ್ಕಿಂಗ್ ಸ್ಟಾಫ್ ಮತ್ತು ಕ್ಯಾಂಟೀನ್ ಅಟೆಂಡೆಂಟ್ ಸೇರಿದಂತೆ ಒಟ್ಟು 291 ಹುದ್ದೆಗಳಿಗೆ ಆದಾಯ ತೆರಿಗೆ ನೇಮಕಾತಿ 2023 ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆದಾಯ ತೆರಿಗೆ ನೇಮಕಾತಿ 2023 ಗಾಗಿ ಆನ್ಲೈನ್ನಲ್ಲಿ incometaxmumbai.gov.in ಅಧಿಕೃತ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.
ಆಯಾ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಲು ಒಟ್ಟು ಆರು ಪಟ್ಟಿಗಳನ್ನುಸಿದ್ಧಪಡಿಸಲಾಗುವುದು. ಅರ್ಜಿ ಶುಲ್ಕ 200 ರೂ. ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸಿನ ಮಿತಿ ಒಂದು ಹುದ್ದೆಯಿಂದ ಮತ್ತೊಂದು ಹುದ್ದೆಗೆ ಬದಲಾಗುತ್ತದೆ ಎಂಬುದನ್ನು ಆಕಾಂಕ್ಷಿಗಳು ಗಮನಿಸಬೇಕು.