ಮದುವೆಯಾಗಿ 16 ವರ್ಷದ ನಂತ್ರ ಪತ್ನಿಯೊಬ್ಬಳ ಬಣ್ಣ ಬಯಲಾಗಿದೆ. ಪತ್ನಿ ಮಾಡಿದ ಮೋಸಕ್ಕೆ ಪತಿ ದಂಗಾಗಿ ಹೋಗಿದ್ದಾನೆ. ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು, ಶೀಘ್ರದಲ್ಲಿಯೇ ತೀರ್ಪು ಬರುವ ನಿರೀಕ್ಷೆಯಲ್ಲಿ ನೊಂದ ಪತಿ ಇದ್ದಾನೆ.
ಘಟನೆ ನಡೆದಿರೋದು ಚೀನಾದ ಜಿಯಾಂಗ್ಸಿ ಪ್ರಾಂತ್ಯದಲ್ಲಿ. ಅಲ್ಲಿನ ಚೆನ್ ಜಿಶಿಯಾನ್ ಎಂಬ ವ್ಯಕ್ತಿ ತನ್ನ ಪತ್ನಿಯ ವಿರುದ್ಧ ವಿಚ್ಛೇದನ ಅರ್ಜಿ ಸಲ್ಲಿಸಿದ್ದ. ಆತನ ಪತ್ನಿಯ ಹೆಸರು ಯು. ಚೆನ್ ಜಿಶಿಯಾನ್ ಗೆ ನಾಲ್ಕು ಮಕ್ಕಳು. ಅವರಲ್ಲಿ ಯಾರೂ ಜಿಶಿಯಾನ್ ಮಕ್ಕಳಲ್ಲ ಎಂಬ ಸತ್ಯ ಗೊತ್ತಾಗಿದೆ.
ಎಲ್ಲ ಮಕ್ಕಳನ್ನು ಪತ್ನಿಯು ಬೇರೆಯವರಿಂದ ಪಡೆದಿದ್ದಾಳೆ. ಪತ್ನಿಯ ಕೊನೆ ಹೆರಿಗೆ ಸಮಯದಲ್ಲಿ ಬೇರೆ ವ್ಯಕ್ತಿಯೊಬ್ಬ ಆಸ್ಪತ್ರೆಗೆ ಬಂದಿದ್ದ. ಇದ್ರಿಂದ ಅನುಮಾನಗೊಂಡ ಪತಿ ತನಿಖೆ ನಡೆಸಿದಾಗ ಸತ್ಯ ಬಯಲಾಗಿದೆ. ಪತ್ನಿ ಎಲ್ಲ ನಾಲ್ಕು ಮಕ್ಕಳನ್ನು ಆ ವ್ಯಕ್ತಿಯಿಂದಲೇ ಪಡೆದಿದ್ದಾಳೆ ಎಂಬುದು ಅರಿವಾಗಿದೆ. ಮಕ್ಕಳ ಡಿ ಎನ್ ಎ ಪರೀಕ್ಷೆ ಕೂಡ ನಡೆದಿದೆ. ಪತ್ನಿ ಮೋಸ ಬಯಲಾದ ಮೇಲೆ ಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾನೆ.
ಈ ಎಲ್ಲ ಮಕ್ಕಳು ಯಾರದ್ದು ಎಂಬ ಪ್ರಶ್ನೆಗೆ ಪತ್ನಿ ಉತ್ತರಿಸಿಲ್ಲ. ಪತಿಯಿಂದ ಮಕ್ಕಳನ್ನು ನೀಡಲಾಗಲ್ಲ ಎಂದಾಗ ಮಕ್ಕಳನ್ನು ದತ್ತು ಪಡೆಯುತ್ತೇವೆ. ಇದು ಕೂಡ ಅದೇ ರೀತಿ ಎನ್ನುವ ಮಹಿಳೆ ಇಷ್ಟು ವರ್ಷದಿಂದ ಈತನನ್ನೇ ತನ್ನ ಮಕ್ಕಳು ಅಪ್ಪ ಎಂದು ಕರೆದಿದ್ದಾರೆ ಎಂದು ವಾದಿಸಿದ್ದಾಳೆ. ಅಲ್ಲದೆ ಡಿ ಎನ್ ಎ ಪರೀಕ್ಷೆ ನಡೆಸೋದು ಕ್ರೂರತ್ವ ಎಂದಿದ್ದಾಳೆ.