ಬೆಂಗಳೂರು: ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಬಡ ರೋಗಿಗಳ ವೈದ್ಯಕೀಯ ಚಿಕಿತ್ಸೆಗೆ ಪರಿಹಾರ ಕೋರಿ ಶಾಸಕರು ಮತ್ತು ಸಂಸದರು ಮಾಡುವ ಶಿಫಾರಸುಗಳಲ್ಲಿ ಅವರ ಕ್ಷೇತ್ರ ಒಳಗೊಂಡಂತೆ ಅವರ ಜಿಲ್ಲಾ ವ್ಯಾಪ್ತಿಗೆ ಸಂಬಂಧಿಸಿದ ವಿಳಾಸಗಳ ಅರ್ಜಿಗಳನ್ನು ಕೂಡ ಆದ್ಯತೆ ಮೇಲೆ ಪರಿಗಣಿಸುವಂತೆ ಮುಖ್ಯಮಂತ್ರಿ ಕಚೇರಿ ಸೂಚನೆ ನೀಡಿದೆ.
ಕಳೆದ ಅಕ್ಟೋಬರ್ ನಲ್ಲಿ ಶಾಸಕರು, ಸಂಸದರು ಮಾಡುವ ಶಿಫಾರಸು ಕ್ಷೇತ್ರ ವ್ಯಾಪ್ತಿಯದ್ದಾಗಿದ್ದರೆ ಮಾತ್ರ ಆದ್ಯತೆ ನೀಡುವಂತೆ ಸೂಚಿಸಲಾಗಿತ್ತು. ಈಗ ಕ್ಷೇತ್ರ, ಜಿಲ್ಲಾ ವ್ಯಾಪ್ತಿ ವಿಳಾಸದಾರರಿಗೆ ಶಿಫಾರಸು ಮಾಡಿದ್ದಲ್ಲಿ ಅರ್ಜಿಗಳನ್ನು ಸಾಮಾನ್ಯ ಪ್ರಕರಣ ಎಂದು ಪರಿಗಣಿಸಲಾಗುವುದು. ನಿಯಮಾನಸಾರ ಪರಿಹಾರ ಮೊತ್ತ ಬಿಡುಗಡೆಗೆ ಮುಖ್ಯಮಂತ್ರಿಗಳ ಕಾರ್ಯದರ್ಶಿ ಸೂಚನೆ ನೀಡಿದ್ದಾರೆ.
ಮುಖ್ಯಮಂತ್ರಿಗಳ ನಿರ್ದೇಶನದಂತೆ ತಿದ್ದುಪಡಿ ಮಾಡಲಾಗಿದ್ದು, ಶಾಸಕರು, ಸಂಸದರ ಶಿಫಾರಸುಗಳಲ್ಲಿ ಅವರ ಜಿಲ್ಲಾ ವ್ಯಾಪ್ತಿಯ ವಿಳಾಸದಾರರನ್ನು ಆದ್ಯತೆ ಮೇರೆಗೆ ಪರಿಗಣಿಸಬೇಕು. ಅವರ ಜಿಲ್ಲಾ ವ್ಯಾಪ್ತಿ ಹೊರತುಪಡಿಸಿ ಬೇರೆ ಜಿಲ್ಲೆ ವಿಳಾಸದಾರರಿಗೆ ಶಿಫಾರಸು ಮಾಡಿದ್ದಲ್ಲಿ ಅಂತಹ ಅರ್ಜಿಗಳನ್ನು ನಿಯಮಾನಸಾರ ಪರಿಗಣಿಸಬೇಕು. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಕಾರ್ಯದರ್ಶಿ ಡಾ. ಕೆ.ಎ. ತ್ರಿಲೋಕ್ ಚಂದ್ರ ಸೂಚಿಸಿದ್ದಾರೆ.