alex Certify ʻ2024- ಪ್ರಯಾಣಿಕ ಸ್ನೇಹಿ ವರ್ಷʼ ಎಂದು ʻKSRTCʼ ಘೋಷಣೆ : ಶೀಘ್ರವೇ ‘ಕ್ಯಾಶ್ ಲೆಸ್’ ಟಿಕೆಟಿಂಗ್ ವ್ಯವಸ್ಥೆ ಜಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʻ2024- ಪ್ರಯಾಣಿಕ ಸ್ನೇಹಿ ವರ್ಷʼ ಎಂದು ʻKSRTCʼ ಘೋಷಣೆ : ಶೀಘ್ರವೇ ‘ಕ್ಯಾಶ್ ಲೆಸ್’ ಟಿಕೆಟಿಂಗ್ ವ್ಯವಸ್ಥೆ ಜಾರಿ

ಬೆಂಗಳೂರು :  ಕೆಎಸ್‌ಆರ್‌ಟಿಸಿ 2024ನೇ ವರ್ಷವನ್ನು ‘ಪ್ರಯಾಣಿಕ ಸ್ನೇಹಿ ವರ್ಷ’ ಎಂದು ಘೋಷಣೆ ಮಾಡಿದೆ. 1,000 ವಾಹನಗಳಿಗೆ ಪುನಶ್ಚೇತನ ಯೋಜನೆ, ಮಾಹಿತಿ ತಂತ್ರಜ್ಞಾನ ಆಧುನೀಕರಣಗೊಳಿಸಿ, ಪ್ರಯಾಣಿಕರ ಅನುಕೂಲಕ್ಕಾಗಿ ವಿಟಿಎಂಎಸ್‌, ಮೊಬೈಲ್‌ ಆ್ಯಪ್‌, ನಗದು ರಹಿತ ಸೇವೆಗೆ ಆದ್ಯತೆ, ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಲು ಚಾಲನಾ ಸಿಬ್ಬಂದಿಗೆ ತರಬೇತಿ ಹಮ್ಮಿಕೊಳ್ಳಲಾಗುವುದು ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್‌ ತಿಳಿಸಿದ್ದಾರೆ.̳

ಪ್ರಯಾಣಿಕರಿಗೆ ಕೆಎಸ್ ಆರ್ ಟಿಸಿ ( KSRTC)   ಗುಡ್ ನ್ಯೂಸ್ ನೀಡಿದ್ದು, ಶೀಘ್ರವೇ ಕ್ಯಾಶ್ ಲೆಸ್ ಟಿಕೆಟ್ ವ್ಯವಸ್ಥೆ ಜಾರಿಗೆ ತರಲಿದೆ. ಈಗಾಗಲೇ ಈ ವ್ಯವಸ್ಥೆಗಳು ಪ್ರಕ್ರಿಯೆ ಆರಂಭವಾಗಿದ್ದು, ಪ್ರಯಾಣಿಕರು ಕ್ಯಾಶ್ ಲೆಸ್ ಮೂಲಕ ಟಿಕೆಟ್ ಪಡೆಯಬಹುದು.

ಹೌದು, ಬಸ್ ಗಳು ರಶ್ ಇದ್ದಾಗ ಕಂಡಕ್ಟರ್ ಗಳು ಚಿಲ್ಲರೆಗಾಗಿ ಬಸ್ ನಲ್ಲಿ ಪ್ರಯಾಣಿಕರ ಜೊತೆ ಜಗಳ, ಕಿರಿಕಿರಿ ಮಾಡುವುದನ್ನು ತಪ್ಪಿಸಲು ಹಾಗೂ ಕೆಲವರು ಬಸ್ ನಲ್ಲಿ ಟಿಕೆಟ್ ಪಡೆಯದೇ ಪ್ರಯಾಣ ಮಾಡುವುದನ್ನು ತಪ್ಪಿಸಲು ಈ ವ್ಯವಸ್ಥೆ ಜಾರಿಗೆ ಬರಲಿದೆ. ಆ್ಯಂಡ್ರಾಯ್ಡ್ ಸೌಲಭ್ಯದ ವಿದ್ಯುನ್ಮಾನ ಟಿಕೆಟ್ ಯಂತ್ರಗಳಲ್ಲಿ ಯಾವುದೇ ಯುಪಿಐ ವ್ಯವಸ್ಥೆ, ಕಾರ್ಡ್ಗಳ ಮೂಲಕ ಹಣ ಪಾವತಿ ಮಾಡಬಹುದಾಗಿದೆ.

ಪ್ರಯಾಣಿಕರು ವೈಫೈ ಸಂಪರ್ಕ, ಯುಪಿಐ, ಕ್ಯುಆರ್ ಕೋಡ್, ವಿವಿಧ ಕಾರ್ಡ್ ಗಳ ಮೂಲಕ ಹಣ ಪಾವತಿಸಬಹುದಾಗಿದೆ, ಈ ನಿಟ್ಟಿನಲ್ಲಿ 10,500 ಇಟಿಎಂ ಯಂತ್ರಗಳನ್ನು ಖರೀದಿಸಲು ಸರ್ಕಾರ ಸಿದ್ದತೆ ನಡೆಸಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ಶೀಘ್ರವೇ ಕ್ಯಾಶ್ ಲೆಸ್ ಟಿಕೆಟ್ ವ್ಯವಸ್ಥೆ ಜಾರಿಗೆ ಬರಲಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...