ಮಹತ್ವಾಕಾಂಕ್ಷಿ ಬೆಂಗಳೂರು ಸಬರ್ಬನ್ ರೈಲು ಯೋಜನೆ (BSRP)ಯ ಕಾರಿಡಾರ್-2ರಲ್ಲಿ ದಾಖಲೆಯ 31 ಮೀ. ಉದ್ದದ ಯು-ಗರ್ಡರ್ ಅನ್ನು ದೇವನಹಳ್ಳಿಯಲ್ಲಿ (ಕಾಸ್ಟಿಂಗ್ ಯಾರ್ಡ್ ನಲ್ಲಿ) ಶನಿವಾರ ರಾತ್ರಿ ಸಿದ್ಧಪಡಿಸಲಾಗಿದೆ ಎಂದು ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
ದೇಶದ ಉಳಿದ ಮೆಟ್ರೋಗಳಲ್ಲಿ 28ಮೀ. ಉದ್ದದ ಗರ್ಡರ್ (ಸಿಮೆಂಟ್ ಮತ್ತು ಕಬ್ಬಿಣದ ತೊಲೆ) ತಯಾರಿಸಿದ್ದು ಇದುವರೆಗಿನ ದಾಖಲೆಯಾಗಿದೆ. BSRP ಈ ದಾಖಲೆಯನ್ನು ಮುರಿದೆ. ಇಂತಹ 450 ‘ಯು-ಗರ್ಡರ್’ಗಳು ಕಾರಿಡಾರ್-2ರಲ್ಲಿ ಅಗತ್ಯವಾಗಿದ್ದು, ಯಶವಂತಪುರ-ಹೆಬ್ಬಾಳ ನಡುವೆ ಸದ್ಯದಲ್ಲೇ ಅಳವಡಿಸಲಾಗುವುದು ಎಂದರು.
ಯು-ಗರ್ಡರ್ ಒಂದು ತಾಂತ್ರಿಕ ಅದ್ಭುತವಾಗಿದ್ದು, ಸರಕಾರಿ ಸ್ವಾಮ್ಯದ ಕೆ-ರೈಡ್ ಇದರ ಉಸ್ತುವಾರಿ ಮತ್ತು ಗುಣಮಟ್ಟ ನಿಯಂತ್ರಣಗಳನ್ನು ನೋಡಿಕೊಂಡಿದೆ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.