HomeKarnatakaBIG NEWS: ಪದವೀಧರರಿಗೆ ಹಣ ನೀಡುವ ಬದಲು ಉದ್ಯೋಗ ನೀಡಿ; ಸರ್ಕಾರಕ್ಕೆ ವಾಟಾಳ್ ನಾಗರಾಜ್ ಸಲಹೆ

BIG NEWS: ಪದವೀಧರರಿಗೆ ಹಣ ನೀಡುವ ಬದಲು ಉದ್ಯೋಗ ನೀಡಿ; ಸರ್ಕಾರಕ್ಕೆ ವಾಟಾಳ್ ನಾಗರಾಜ್ ಸಲಹೆ

ಮೈಸೂರು: ಕಾಂಗ್ರೆಸ್ ಸರ್ಕಾರದ ಪಧವಿಧರರಿಗೆ ಆರ್ಥಿಕ ನೆರವು ನೀಡುವ ಯುವನಿಧಿ ಯೋಜನೆ ಜಾರಿಗೆ ಸಿದ್ಧತೆ ನಡೆಸಲಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ಪದವೀಧರರಿಗೆ ಹಣ ನೀಡುವ ಬದಲು ಉದ್ಯೋಗ ನೀಡಿ ಎಂದು ಸಲಹೆ ನೀಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಸರ್ಕಾರ ಪದವೀಧರರಿಗೆ ಹಣ ನೀಡುವ ಬದಲು ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ, ಪದವೀಧರರಿಗೆ ಉದ್ಯೋಗ ನೀಡಲಿ ಎಂದು ಆಗ್ರಹಿಸಿದರು.

ಹೋಟೆಲ್ ಗಳಲ್ಲಿ ಟೀ, ಕಾಫಿ, ದೋಸೆ, ತಿಂಡಿ ಬೆಲೆ 150 ರೂಪಾಯಿ ಆಗಿದೆ. ಹೀಗಿರುವಾಗ ಸರ್ಕಾರ ಕೊಡುವ ಹಣದಿಂದ ಅವರಿಗೆ ಟೀ, ಕಾಫಿ ಕುಡಿಯಲೂ ಯೋಚಿಸಬೇಕಾಗುತ್ತೆ. ಮೂರು ಸಾವಿರ, ಒಂದುವರೆ ಸಾವಿರ ನೀಡುವ ಮೂಲಕ ಪದವೀಧರರಿಗೆ ಅಗೌರವ ತೋರಿದಂತಾಗುತ್ತದೆ. ವರ್ಷಕ್ಕೆ ಎಷ್ಟು ಜನ ಪದವಿಧರರಾಗುತ್ತಿದ್ದಾರೆ ಎಂಬುದರ ಅರಿವಿದೆಯೇ? ಪದವೀಧರರ ಸಮಸ್ಯೆ ಆಲಿಸಲೆಂದೇ ಸರ್ಕಾರ ಓರ್ವ ಸಚಿವರನ್ನು ನೇಮಕ ಮಾಡಬೇಕು ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕನ್ನಡಿಗರಿಗೆ ಉನ್ನತ ಶಿಕ್ಷಣ ಮಾಡಲು ಸಾಧ್ಯವಾಗುತ್ತಿಲ್ಲ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್, ಮಠಾಧೀಶರ ಕಾಲೇಜುಗಳಲ್ಲಿ ಹೊರಗಿನ ರಾಜ್ಯದವರಿಗೆ ಸೀಟು ಕೊಡುತ್ತಿದ್ದೀರಿ. ಮೊದಲು ಕನ್ನಡಿಗರಿಗೆ ಆದ್ಯತೆ ಕೊಡಬೇಕು ಎಂದರು.

For Latest News Updates, Join Our Whatsapp Community🚩
RELATED ARTICLES

Most Popular