HomeKarnatakaರಾಜ್ಯದ ರೈತರಿಗೆ ಗುಡ್ ನ್ಯೂಸ್ : ಮುಂಗಾರು ಹಂಗಾಮಿನ ‘ಬೆಳೆಹಾನಿ’ಗೆ ಸರ್ಕಾರದಿಂದ ಪರಿಹಾರ ಬಿಡುಗಡೆ

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಮುಂಗಾರು ಹಂಗಾಮಿನ ‘ಬೆಳೆಹಾನಿ’ಗೆ ಸರ್ಕಾರದಿಂದ ಪರಿಹಾರ ಬಿಡುಗಡೆ

ಬೆಂಗಳೂರು : ಮುಂಗಾರು ಹಂಗಾಮಿನ ‘ಬೆಳೆ ಹಾನಿ’ಗೆ ರಾಜ್ಯ ಸರ್ಕಾರ ಪರಿಹಾರ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದೆ.

ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯದ ಬರ ನಿರ್ವಹಣೆ ಕೈಪಿಡಿ 2020 ರನ್ವಯ, ಜೂನ್ 1 ರಿಂದ ಆಗಸ್ಟ್ 19 ರವರೆಗಿನ ಅವಧಿಗೆ ಎಲ್ಲಾ ಮಾನದಂಡಗಳನ್ನು ವಿಶ್ಲೇಷಿಸಿ 195 ತಾಲ್ಲೂಕುಗಳನ್ನು ಬರ ಪರಿಸ್ಥಿತಿ ಕಂಡುಬಂದಿರುವ ತಾಲ್ಲೂಕುಗಳೆಂದು ಗುರುತಿಸಿ ಈ ತಾಲ್ಲೂಕುಗಳಲ್ಲಿ ಬೆಳೆ ಸಮೀಕ್ಷೆ ದೃಢೀಕರಣ (GT) ಕೈಗೊಂಡು 195 ತಾಲ್ಲೂಕುಗಳನ್ನು ಮೇಲೆ ಒದಲಾದ (1)ರ ಸರ್ಕಾರಿ ಆದೇಶ ದಿನಾಂಕ:13-9-2023ರಂದು ಬರ ಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿದೆ.

ಕೇಂದ್ರ ಸರ್ಕಾರದ SDRF/NDRF ಮಾರ್ಗಸೂಚಿಯನುಸಾರ ಬರ ಪರಿಸ್ಥಿತಿಯಿಂದ ಶೇ.33% ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉಂಟಾದ ಬೆಳೆ ಹಾನಿಗೆ ಗರಿಷ್ಠ 02 ಹೆಕ್ಟೇರ್ಗೆ ಸೀಮಿತಗೊಳಿಸಿ ಈ ಕೆಳಕಂಡ ದರದಲ್ಲಿ ಇನ್ಪುಟ್ ಸಬ್ಸಿಡಿ ನಿಗಧಿಪಡಿಸಲಾಗಿದೆ ಎಂದು ಸರ್ಕಾರ ಆದೇಶ ಹೊರಡಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಳೆಯಾಶ್ರಿತ ಬೆಳೆ ನಷ್ಟಕ್ಕೆ ಪ್ರತಿ ಹೆಕ್ಟೇರ್ ಗಳಿಗೆ ರೂ.8,500, ನೀರಾವರಿ ಬೆಳೆಗೆ ರೂ.17,000 ಹಾಗೂ ಬಹು ವಾರ್ಷಿಕ ಬೆಳೆ ನಷ್ಟ ಪರಿಹಾರಕ್ಕೆ ರೂ.22,500 ಪರಿಹಾರವನ್ನು ನಿಗದಿ ಮಾಡಿ, ಅದಕ್ಕಾಗಿ ರಾಜ್ಯ ಸರ್ಕಾರವು 105 ಕೋಟಿಯನ್ನು ಆಯುಕ್ತರು, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಬೆಂಗಳೂರು ಇವರಿಗೆ ಬಿಡುಗಡೆ ಮಾಡಿದೆ.ಪ್ರತಿ ರೈತರಿಗೆ ಗರಿಷ್ಠ 2000ರವರೆಗೆ ರೈತರಿಗೆ ಪಾವತಿಸಲು 2023-24ನೇ ಸಾಲಿನ ರಾಜ್ಯ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಹಣವನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular