ಟೋಕಿಯೊ : ಈ ವಾರದ ಆರಂಭದಲ್ಲಿ ಮಧ್ಯ ಜಪಾನಿನ ಇಶಿಕಾವಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪಗಳ ಸರಣಿಯಲ್ಲಿ ಮೃತಪಟ್ಟವರ ಸಂಖ್ಯೆ ಶುಕ್ರವಾರ 92ಕ್ಕೆ ಏರಿಕೆಯಾಗಿದ್ದು, ಕನಿಷ್ಠ 242 ಮಂದಿ ನಾಪತ್ತೆಯಾಗಿದ್ದಾರೆ.
ಸ್ವಯಂ-ರಕ್ಷಣಾ ಪಡೆಗಳು ಸುಮಾರು 4,600 ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ಮುಂದುವರೆಸಿದೆ. ಕಾಣೆಯಾದ ಜನರಿಗಾಗಿ ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಗಳೊಂದಿಗೆ ಸಹಕರಿಸುತ್ತಿವೆ ಎಂದು ವರದಿ ತಿಳಿಸಿದೆ.
ಭೂಕಂಪದ ಸಮಯದಲ್ಲಿ ವಾಜಿಮಾ ನಗರದ ಮಧ್ಯಭಾಗದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡ ನಂತರ ಸುಮಾರು 48,000 ಚದರ ಮೀಟರ್ ಪ್ರದೇಶವು 4.5 ಫುಟ್ಬಾಲ್ ಮೈದಾನಗಳ ಗಾತ್ರಕ್ಕೆ ಸಮನಾಗಿದೆ ಎಂದು ಜಪಾನ್ನ ಜಿಯೋಸ್ಪೇಷಿಯಲ್ ಇನ್ಫಾರ್ಮೇಶನ್ ಅಥಾರಿಟಿಯ ವರದಿ ತಿಳಿಸಿದೆ.ಇದರ ನಡುವೆ 700 ಕ್ಕೂ ಹೆಚ್ಚು ಜನರು ಪ್ರಾಂತ್ಯದಾದ್ಯಂತ ಪ್ರತ್ಯೇಕ ಸಮುದಾಯಗಳಲ್ಲಿ ಸಿಲುಕಿದ್ದಾರೆ. ಈ ಪ್ರದೇಶದ ಮೂಲಸೌಕರ್ಯವು ತೀವ್ರ ಹಿನ್ನಡೆಯನ್ನು ಅನುಭವಿಸಿದೆ, ಸುಮಾರು 30,000 ಮನೆಗಳು ವಿದ್ಯುತ್ ಕಡಿತವನ್ನು ಎದುರಿಸುತ್ತಿವೆ ಮತ್ತು 13 ನಗರಗಳು ಮತ್ತು ಪಟ್ಟಣಗಳಲ್ಲಿ 80,000 ಜನರು ಮೂಲ ಸೌಕರ್ಯ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.