ಶಿರಾ : ದುಷ್ಕರ್ಮಿಗಳು ಇಟ್ಟ ಸಿಡಿಮದ್ದು ಸ್ಪೋಟಗೊಂಡು ನಾಯಿಯೊಂದು ಸಾವನ್ನಪ್ಪಿದ ಘಟನೆ ಶಿರಾ ತಾಲೂಕಿನಲ್ಲಿ ನಡೆದಿದೆ.
ಬುಕ್ಕಾ ಪಟ್ಟಣದ ಹೋಬಳಿ ಮಾದೇನಹಳ್ಳಿಯಲ್ಲಿ ಗುರುವಾರ ಈ ಘಟನೆ ನಡೆದಿದೆ. ಮೈದಾನದಲ್ಲಿ ಪೊಟ್ಟಣವೊಂದು ಪತ್ತೆಯಾಗಿದ್ದು, ಅದನ್ನು ಕಚ್ಚಿದ ನಾಯಿಯ ಬಾಯಿ ಪೀಸ್ ಪೀಸ್ ಆಗಿದೆ. ದುಷ್ಕರ್ಮಿಗಳು ಪಟ್ಟಣದಲ್ಲಿ ಸಿಡಿಮದ್ದು ಇಟ್ಟು ಹೋಗಿದ್ದು, ಯಾವ ಉದ್ದೇಶಕ್ಕೆ ಇಟ್ಟಿದ್ದಾರೆ ಎನ್ನುವುದು ಗೊತ್ತಾಗಿಲ್ಲ. ಯಾರನ್ನೋ ಟಾರ್ಗೆಟ್ ಮಾಡಿ ಇಟ್ಟ ಸಿಡಿಮದ್ದು ಮೂಕ ಪ್ರಾಣಿಯ ಬಲಿ ಪಡೆದಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಹಿನ್ನೆಲೆ ಗ್ರಾಮದ ಜನರು ಬೆಚ್ಚಿ ಬಿದ್ದಿದ್ದಾರೆ.