ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ,ಕೆ, ಶಿವಕುಮಾರ್ ದೆಹಲಿಗೆ ಹೋಗಿರುವ ವೇಳೆ ಗುರುವಾರ ರಾತ್ರಿ ಸಚಿವರು ಪ್ರತ್ಯೇಕ ಸಭೆ ನಡೆಸಿರುವುದು ಕುತೂಹಲ ಕೆರಳಿಸಿದೆ.
ಪ್ರಭಾವಿ ಸಚಿವರಾದ ಡಾ.ಜಿ. ಪರಮೇಶ್ವರ್, ಡಾ.ಹೆಚ್.ಸಿ. ಮಹದೇವಪ್ಪ, ಸತೀಶ್ ಜಾರಕಿಹೊಳಿ ಮೊದಲಾದವರು ಪ್ರತ್ಯೇಕವಾಗಿ ಸಭೆ ನಡೆಸಿರುವುದು ಕಾಂಗ್ರೆಸ್ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಸಿಎಂ ಸಿದ್ದರಾಮಯ್ಯ ಅವರು ದೆಹಲಿಗೆ ಪ್ರಯಾಣಿಸುವ ಸಂದರ್ಭದಲ್ಲಿ ಸತೀಶ್ ಜಾರಕಿಹೊಳಿ ಕಾರಿನಲ್ಲೇ ವಿಮಾನ ನಿಲ್ದಾಣದ ವರೆಗೂ ಹೋಗಿ ಚರ್ಚಿಸಿದ್ದರು. ಭೋಜನಕೂಟದ ನೆಪದಲ್ಲಿ ಗುರುವಾರ ರಾತ್ರಿ ಮೂವರು ಸಚಿವರು ಸಭೆ ನಡೆಸಿದ್ದಾರೆ. ಸಭೆಯ ಉದ್ದೇಶ, ಚರ್ಚೆಯ ವಿಷಯದ ಬಗ್ಗೆ ಕುತೂಹಲ ಮೂಡಿಸಿದೆ.
ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ, ಉಪಮುಖ್ಯಮಂತ್ರಿ ಹುದ್ದೆ ಹೆಚ್ಚಳ ಮೊದಲಾದ ವಿಷಯಗಳು ಕುರಿತು ಸಚಿವರ ನಡುವೆ ಚರ್ಚೆ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ.