Viral Video | ಬನಿಯನ್, ಶಾರ್ಟ್ಸ್ ನಲ್ಲಿ ಜಾಗಿಂಗ್ ಮಾಡುತ್ತಲೇ ಮದುವೆ ಮನೆಗೆ ಬಂದ ಅಮೀರ್ ಖಾನ್ ಅಳಿಯ

ಜನವರಿ 3 ರಂದು ಮುಂಬೈನಲ್ಲಿ ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ತಮ್ಮ ಮಗಳ ಮದುವೆ ನೆರವೇರಿಸಿದ್ದಾರೆ. ಪುಣೆ ಮೂಲದ ಫಿಟ್ ನೆಸ್ ತರಬೇತುದಾರ ನೂಪುರ್ ಶಿಖರೆ ಅವರೊಂದಿಗೆ ಅಮೀರ್ ಖಾನ್ ಮಗಳು ಇರಾ ಖಾನ್ ಮದುವೆಯಾಗಿದ್ದಾರೆ. ಹೆಚ್ಚು ಆಡಂಬರವಿಲ್ಲದೇ ಸರಳ ಮತ್ತು ಸಂಭ್ರಮದಿಂದ ನಡೆದ ಈ ಮದುವೆ ಹಲವು ಕಾರಣಗಳಿಗೆ ಗಮನ ಸೆಳೆದಿದೆ. ಮೊದಲು ಮದುವೆಯನ್ನು ನೋಂದಣಿ ಮಾಡಿಸಿದ್ದು, ಆನಂತರ ಸಾಂಪ್ರದಾಯಿಕ ವಿಹಾಹ ನೆರವೇರಿಸಲಾಗಿದೆ.

ಮದುವೆ ನೋಂದಾವಣೆ ಸಮಯದಲ್ಲಿ ನೂಪುರ್ ಶಿಖರೆ ಜಾಗಿಂಗ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗ್ತಿದೆ. ಮದುವೆ ನೋಂದಣಿಗೆಂದು ನೂಪುರ್ ಬನಿಯನ್ ಮತ್ತು ಶಾರ್ಟ್ಸ್ ಧರಿಸಿ ಸ್ನೇಹಿತರೊಂದಿಗೆ ಜಾಗಿಂಗ್ ಮಾಡುತ್ತಾ ಮದುವೆ ಸ್ಥಳಕ್ಕೆ ಬಂದಿದ್ದರು. ಫಿಟ್ ನೆಸ್ ಬಗ್ಗೆ ಜಾಗೃತಿ ಮೂಡಿಸಲು ಅವರು ಈ ರೀತಿ ವಿಭಿನ್ನವಾಗಿ ಮದುವೆ ಮನೆ ಪ್ರವೇಶಿಸಿದ್ದರು. ಈ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡ ಬಳಿಕ ನೂಪುರ್ ಮದುವೆ ದಿನ ಧರಿಸಿದ್ದ ಬಟ್ಟೆ ವಿಚಾರಕ್ಕೆ ಟ್ರೋಲ್ ಆಗ್ತಿದ್ದಾರೆ.

ಮದುವೆಯ ಸ್ಥಳವಾದ ತಾಜ್ ಲ್ಯಾಂಡ್ಸ್ ಎಂಡ್‌ಗೆ ತನ್ನ ಸ್ನೇಹಿತರ ಜೊತೆಗೂಡಿ ಜಾಗಿಂಗ್ ಮಾಡುವ ಮೂಲಕ ಬಂದ ನೂಪುರ್ ಗೆ ಮದುವೆಯಾಗಲು ಜಾಗಿಂಗ್ ಡ್ರೆಸ್ ಕೂಡ ಬದಲಿಸಲು ಸಮಯವಿರಲಿಲ್ಲ. ಓಡುತ್ತಿದ್ದ ಡ್ರೆಸ್ ನಲ್ಲೇ ಮದುವೆ ಮನೆಗೆ ಬಂದಿದ್ದಾರೆ ಎಂದು ತಮಾಷೆ ಮಾಡಿದ್ದಾರೆ.

ಅಮೀರ್ ಖಾನ್ ಅವರ ಬ್ಲಾಕ್ಬಸ್ಟರ್ ಚಿತ್ರ ‘3 ಈಡಿಯಟ್ಸ್’ ನಿಂದ ಹೆಚ್ಚು ಇಷ್ಟವಾದ ದೃಶ್ಯ ಎಂದು ಮತ್ತೊಬ್ಬರು ಹೇಳಿದ್ದಾರೆ. ಅಮೀರ್ ಬಹುಶಃ ನೂಪುರ್‌ನ ಶೆರ್ವಾನಿಯ ಮೇಲೆ ಹಸಿರು ಚಟ್ನಿಯನ್ನು ಚೆಲ್ಲಿರಬಹುದು, ಹೀಗಾಗಿ ಅವರು ಈ ರೀತಿಯ ಅಸಾಂಪ್ರಾಯಿಕ ಬಟ್ಟೆಯನ್ನ ಆಯ್ಕೆ ಮಾಡಿಕೊಂಡಿರಬಹುದು ಎಂದು ಮತ್ತೊಬ್ಬರು ಹೇಳಿದ್ದಾರೆ.

ಇರಾ ಖಾನ್ ಮತ್ತು ನೂಪುರ್ ಮದುವೆ ಸಮಾರಂಭದಲ್ಲಿ ಅಮೀರ್ ಖಾನ್ ಅವರ ಮಾಜಿ ಪತ್ನಿಯರಾದ ರೀನಾ ದತ್ತಾ ಮತ್ತು ಕಿರಣ್ ರಾವ್ ಭಾಗವಹಿಸಿದ್ದರು.

https://youtu.be/O_EYD0j0NBQ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read