Bengaluru : ಬೆಳಗ್ಗೆ ಕೆಲಸಕ್ಕೆ ಸೇರಿಕೊಂಡ, ಮಧ್ಯಾಹ್ನ ಮಾಲೀಕನ ಮಗಳನ್ನೇ ‘ಕಿಡ್ನಾಪ್’ ಮಾಡಿದ ಕಿರಾತಕ..!

ಬೆಂಗಳೂರು : ವ್ಯಕ್ತಿಯೊಬ್ಬ ಫರ್ನಿಚರ್ ಅಂಗಡಿಗೆ ಬೆಳಗ್ಗೆ ಕೆಲಸ ಕೇಳಿಕೊಂಡು ಬಂದು, ಕೆಲಸಕ್ಕೆ ಸೇರಿಕೊಂಡು ನಂತರ ಅಂಗಡಿ ಮಾಲೀಕನ ಮಗಳನ್ನೇ ಕಿಡ್ನ್ಯಾಪ್ ಮಾಡಿದ ಘಟನೆ ಬೆಂಗಳೂರಲ್ಲಿ ನಡೆದಿದೆ.

ಬೆಂಗಳೂರಿನ ಬನಶಂಕರಿ ಠಾಣೆ ವ್ಯಾಪ್ತಿಯ ಕಾವೇರಿಪುರದಲ್ಲಿ ಇತ್ತೀಚೆಗೆ  ಘಟನೆ ನಡೆದಿದೆ. ಆರೋಪಿ ವಸೀಂ ಎಂಬಾತ ಈ ದುಷ್ಕೃತ್ಯ ಎಸಗಿದ್ದು, ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಡಿ.28 ರಂದು  ಬೆಳಗ್ಗೆ ಈತ ಸರ್ ನನಗೆ ಒಂದು ಕೆಲಸ ಮಾಡಿ ಉಪಕಾರ ಮಾಡಿ ಎಂದು ಬೇಡಿಕೊಂಡು ಬಂದು ಕೆಲಸಕ್ಕೆ ಸೇರಿದ್ದಾನೆ. ಈತನ ಕಣ್ಣೀರಿಗೆ ಕರಗಿದ ಮಾಲೀಕ ಶಫೀವುಲ್ಲಾ ಕೆಲಸ ಕೊಟ್ಟಿದ್ದಾರೆ. ಕೆಲಸಕ್ಕೆ ಸೇರಿದ ದಿನವೇ ಈತ ಮಗುವಿಗೆ ಚಾಕಲೇಟ್ ಆಮಿಷವೊಡ್ಡಿ ಮಗುವನ್ನು ಕರೆದುಕೊಂಡು ಎಸ್ಕೇಪ್ ಆಗಿದ್ದಾನೆ. ಈ ಸಂಬಂಧ ಶಫೀವುಲ್ಲಾ ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದಯವಿಟ್ಟು ನನ್ನ ಮಗಳನ್ನು ಹುಡುಕಿ ಕೊಡಿ ಎಂದು ಕಣ್ಣೀರಿಟ್ಟಿದ್ದಾರೆ. ಸದ್ಯ, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read