![](https://kannadadunia.com/wp-content/uploads/2023/06/modi-pm-modi-top-leader.png)
ಕೊಪ್ಪಳ : ಕೇಂದ್ರ ಸರ್ಕಾರಿ ಯೋಜನೆಯ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರ ಪೋಸ್ಟರ್ ಹಿಡಿಯಲು ಗ್ರಾಮಪಂಚಾಯಿತಿ ಅಧ್ಯಕ್ಷೆ ಹಿಂದೇಟು ಹಾಕಿರುವ ಘಟನೆ ನಡೆದಿದೆ.
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಕುದುರಿಮೋದಿ ಗ್ರಾಮದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷೆ ಫರೀದಾ ಬೇಗಂ ಎಂಬುವರು ಪ್ರಧಾನಿ ಮೋದಿ ಅವರ ಫೋಸ್ಟರ್ ಹಿಡಿಯಲು ಹಿಂದೇಟು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.
ಬುಧವಾರ ಗ್ರಾಮದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಗ್ರಾಮಪಂಚಾಯಿತಿ ಸದಸ್ಯರೆಲ್ಲರೂ ಪ್ರಧಾನಿ ಮೋದಿ ಪೋಸ್ಟರ್ ಹಿಡಿದಿದ್ದರೆ, ಮಹಿಳೆ ಮಾತ್ರ ಪೋಸ್ಟರ್ ಹಿಡಿಯುವುದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.