ನವಜಾತ ಶಿಶುಗಳಿಗೆ ದಿನಕ್ಕೆ ಎರಡು ಬಾರಿಯಾದರೂ ಎಣ್ಣೆ ಹಚ್ಚಿ ಮಸಾಜ್ ಮಾಡಲೇಬೇಕು. ಆರೋಗ್ಯಕರ ಮೂಳೆಗಳು ಮತ್ತು ಸ್ನಾಯುಗಳನ್ನು ಅಭಿವೃದ್ಧಿಪಡಿಸಲು ಉತ್ತಮ ಮಾರ್ಗವೆಂದರೆ ಮಕ್ಕಳಿಗೆ ದಿನಕ್ಕೆ 3-4 ಬಾರಿ ಮಸಾಜ್ ಮಾಡುವುದು. ಇದು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಸ್ನಾಯುಗಳ ವಿಶ್ರಾಂತಿ ಮತ್ತು ಕೀಲುಗಳ ನಮ್ಯತೆಗೆ ಸಹಾಯ ಮಾಡುತ್ತದೆ.
ಮಗುವಿನ ಮಸಾಜ್‌ಗೆ ನಾವು ಯಾವ ತೈಲವನ್ನು ಬಳಸುತ್ತೇವೆ ಎಂಬುದು ಕೂಡ ಬಹಳ ಮುಖ್ಯ. ಇದು ನೇರವಾಗಿ ಮೂಳೆಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುವುದಿಲ್ಲವಾದರೂ ಮಗುವಿಗೆ ಉತ್ತಮ ಮತ್ತು ಹಿತವಾದ ಅನುಭವವನ್ನು ಉಂಟುಮಾಡುತ್ತದೆ. ಸಂಪೂರ್ಣ ದೈಹಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ.
ತೇವಾಂಶ ಮತ್ತು ಸೌಮ್ಯವಾದ ಸುವಾಸನೆಯಿಂದ ಸಮೃದ್ಧವಾಗಿರುವ ತೆಂಗಿನ ಎಣ್ಣೆಯು ಮಗುವಿನ ಮಸಾಜ್‌ಗೆ ಒಳ್ಳೆಯದು. ಆದರೆ ಚಳಿಗಾಲದಲ್ಲಿ ಸಾಸಿವೆ ಎಣ್ಣೆಯ ಮಸಾಜ್ ಉತ್ತಮ ಎನ್ನುತ್ತಾರೆ ಅನೇಕರು. ಕಾರಣ ಸಾಸಿವೆ ಎಣ್ಣೆ ಉಷ್ಣ ಪರಿಣಾಮಗಳನ್ನು ಹೊಂದಿದೆ.
ವೈಜ್ಞಾನಿಕವಾಗಿ ಮೂಳೆಯ ಬಲವನ್ನು ಹೆಚ್ಚಿಸಲು, ನಿದ್ರೆಯನ್ನು ಸುಧಾರಿಸಲು ಮತ್ತು ಬೆಳವಣಿಗೆಯನ್ನು ಉತ್ತೇಜಿಸಲು ಮಗುವಿಗೆ ಮಸಾಜ್ ಮಾಡುತ್ತೇವೆ. ಆದರೆ ಇದಕ್ಕೆ ಭಾವನಾತ್ಮಕ ನಂಟು ಕೂಡ ಇದೆ. ಇಂಟರ್‌ನ್ಯಾಶನಲ್ ಅಸೋಸಿಯೇಷನ್ ಆಫ್ ಇನ್ಫ್ಯಾಂಟ್ ಮಸಾಜ್ (IAIM) ಪ್ರಕಾರ, ಮಗುವಿನ ಮಸಾಜ್ ಪ್ರೀತಿಯ ಸ್ಪರ್ಶವನ್ನೂ ಮೀರಿದ್ದು. ಇದು ವಿಶ್ರಾಂತಿಯ ಜೊತೆಗೆ ವಿಶಿಷ್ಟ ಬಂಧವನ್ನು ಬೆಸೆಯುತ್ತದೆ. ಪೋಷಕರು ಮತ್ತು ಮಗುವಿನ ನಡುವಿನ ಬಾಂಧವ್ಯವನ್ನು ಬಲಪಡಿಸುತ್ತದೆ.
ಮಸಾಜ್ ಮಗುವಿನ ದೇಹವನ್ನು ಉತ್ತೇಜಿಸುತ್ತದೆ. ಉತ್ತಮ ಜೀರ್ಣಕ್ರಿಯೆ ಮತ್ತು ನಿದ್ರೆಯನ್ನು ಉತ್ತೇಜಿಸುತ್ತದೆ. ಮಸಾಜ್ ಮೂಲಕ ಶಿಶುಗಳು ತಮ್ಮ ಇಂದ್ರಿಯಗಳನ್ನು ಅನ್ವೇಷಿಸುತ್ತಾರೆ, ಸಂವಹನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುತ್ತಾರೆ ಮತ್ತು ಸ್ವಯಂ ನಿಯಂತ್ರಣವನ್ನು ಕಲಿಯುತ್ತಾರೆ.
ಮಗು ಆರಾಮಾಗಿ ರಿಲ್ಯಾಕ್ಸ್ ಆಗಿರುವುದನ್ನು ನೋಡುವುದು ಹೆತ್ತವರಿಗೂ ಒಂದು ರೀತಿಯ ಆನಂದ. ಇದು ಕುಟುಂಬದ ಬಾಂಧವ್ಯವನ್ನು ಗಾಢಗೊಳಿಸುತ್ತದೆ.
ಉಳಿದೆಲ್ಲಾ ತೈಲಗಳಿಗಿಂತ ತೆಂಗಿನ ಎಣ್ಣೆಯು ಮಗುವಿನ ಮಸಾಜ್‌ಗೆ ಒಳ್ಳೆಯದು. ಇದು ಸೌಮ್ಯವಾದ ಆರ್ಧ್ರಕ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಮಗುವಿನ ಸೂಕ್ಷ್ಮ ಚರ್ಮಕ್ಕೆ ಸೂಕ್ತವಾಗಿದೆ. ತೆಂಗಿನ ಎಣ್ಣೆ ಶುಷ್ಕತೆಯನ್ನು ತಡೆಯುತ್ತದೆ. ಡೈಪರ್‌ನಿಂದ ಅಲರ್ಜಿಯಾಗದಂತೆ ನೈಸರ್ಗಿಕವಾಗಿ ಗುಣಪಡಿಸುತ್ತದೆ. ಮಗುವಿನ ಚರ್ಮದ ಮೇಲೆ ದದ್ದುಗಳು ಕಾಣಿಸಿಕೊಳ್ಳುವುದಿಲ್ಲ.