HomeKarnatakaಶಿವಮೊಗ್ಗ-ತಿರುಪತಿ ವಿಮಾನ ಕೊನೇ ಕ್ಷಣದಲ್ಲಿ ರದ್ದು; ಏರ್ ಪೋರ್ಟ್ ನಲ್ಲೇ ಕಾದು ಕುಳಿತ ಪ್ರಯಾಣಿಕರ ಆಕ್ರೋಶ

ಶಿವಮೊಗ್ಗ-ತಿರುಪತಿ ವಿಮಾನ ಕೊನೇ ಕ್ಷಣದಲ್ಲಿ ರದ್ದು; ಏರ್ ಪೋರ್ಟ್ ನಲ್ಲೇ ಕಾದು ಕುಳಿತ ಪ್ರಯಾಣಿಕರ ಆಕ್ರೋಶ

ಶಿವಮೊಗ್ಗ: ಶಿವಮೊಗ್ಗದಿಂದ ತಿರುಪತಿಗೆ ಹಾರಾಟ ನಡೆಸಬೇಕಿದ್ದ ವಿಮಾನ ಕೊನೇ ಕ್ಷಣದಲ್ಲಿ ರದ್ದಾಗಿದ್ದು, ಪ್ರಯಾಣಿಕರು ಏರ್ ಪೋರ್ಟ್ ನಲ್ಲಿಯೇ ಪರದಾಡಿದ ಘಟನೆ ನಡೆದಿದೆ.

ತಾಂತ್ರಿಕ ಕಾರಣದಿಂದಾಗಿ ಶಿವಮೊಗ್ಗ-ತಿರುಪತಿ ನಡುವಿನ ವಿಮಾನ ರದ್ದಾಗಿದೆ. ಕೊನೇ ಕ್ಷಣದಲ್ಲಿ ಸ್ಟಾರ್ ಏರ್ ಲೈನ್ಸ್ ವಿಮಾನ ಹಾರಾಟ ರದ್ದುಗೊಳಿಸಿದೆ. ತಿರುಪತಿಗೆ ತೆರಳಲೆಂದು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಯಾಣಿಕರು ಮೂರು ಗಂಟೆಗೂ ಹೆಚ್ಚು ಕಾಲ ವಿಮಾನ ನಿಲ್ದಾಣದಲ್ಲೆ ಕಾದು ಕಾದು ಸುಸ್ತಾಗಿದ್ದಾರೆ.

ತಿರುಪತಿಯಲ್ಲಿ ದರ್ಶನಕ್ಕಾಗಿ ಹಲವು ಭಕ್ತರು ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಿದ್ದರು. ಆದರೆ ಈಗ ವಿಮಾನ ಹಾರಾಟ ಏಕಾಏಕಿ ರದ್ದಾಗಿದ್ದರಿಂದ ತಿರುಪತಿಗೆ ಹೋಗಲೂ ಸಾಧ್ಯವಾಗದೇ ವಿಮಾನ ಯಾನ ಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪದೇ ಪದೇ ಶಿವಮೊಗ್ಗ-ತಿರುಪತಿ ನಡುವಿಮ ವಿಮಾನ ರದ್ದಾಗುತ್ತಿದೆ. ಕೊನೇ ಕ್ಷಣದಲ್ಲಿ ಮಾಹಿತಿ ನೀಡಲಾಗುತ್ತಿದೆ. ಇದರಿಂದಾಗಿ ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಗಿದೆ ಎಂದು ಕಿಡಿಕಾರಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular